ಮಂಗಳೂರು: ಪ್ರಸಕ್ತ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಕರ್ಣಾಟಕ ಬ್ಯಾಂಕ್ ₹87.38 ಕೋಟಿ ನಿವ್ವಳ ಲಾಭ ಗಳಿಸಿದೆ.
‘ಕಳೆದ ವರ್ಷದ ಮೂರನೇ ತ್ರೈಮಾಸಿಕಕ್ಕಿಂತ ಶೇ 27.52 ರಷ್ಟು ಪ್ರಗತಿ ಸಾಧಿಸಿದೆ. ಕಳೆದ ವರ್ಷ ಮೂರನೇ ತ್ರೈಮಾಸಿಕದಲ್ಲಿ ಬ್ಯಾಂಕ್ ₹68.52 ಕೋಟಿ ಲಾಭ ಗಳಿಸಿತ್ತು’ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್ ಮಾಹಿತಿ ನೀಡಿದ್ದಾರೆ.
‘ಸಾಲ ವಿತರಣೆ ಶೇ 24.10 ರಷ್ಟು ವೃದ್ಧಿಯಾಗಿದೆ. ನಿರ್ವಹಣಾ ಲಾಭದಲ್ಲಿ ಶೇ 87.30 ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಶೇ 4.30 ರಷ್ಟಿದ್ದ ವಸೂಲಾಗದ ಸಾಲದ ಪ್ರಮಾಣ, ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಶೇ 3.97ಕ್ಕೆ ಕುಗ್ಗಿದೆ’ ಎಂದು ತಿಳಿಸಿದ್ದಾರೆ.
‘ಬ್ಯಾಂಕ್ ಒಟ್ಟಾರೆ ₹1,02,182 ಕೋಟಿ ವಹಿವಾಟು ನಡೆಸಿದ್ದು, ಶೇ 9.61 ರಷ್ಟು ಹೆಚ್ಚಳವಾಗಿದೆ’.
‘ಕಳೆದ ವರ್ಷ ಈ ಅವಧಿಯಲ್ಲಿ ದಾಖಲಾಗಿದ್ದ ₹171.86 ಕೋಟಿ ನಿರ್ವಹಣಾ ಲಾಭವು, ಈ ವರ್ಷ ₹321.90 ಕೋಟಿಗೆ ಏರಿದೆ. ಒಂಬತ್ತು ತಿಂಗಳಲ್ಲಿ ನಿರ್ವಹಣಾ ಲಾಭದ ಮೊತ್ತ ₹ 997.84 ಕೋಟಿಯಾಗಿದೆ’ ಎಂದು ಹೇಳಿದ್ದಾರೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.