ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಆರ್ಥಿಕತೆ ಭದ್ರ, ಹಣದುಬ್ಬರ ನಿಯಂತ್ರಣ: ನಿರ್ಮಲಾ ಸೀತಾರಾಮನ್

Last Updated 1 ಫೆಬ್ರುವರಿ 2020, 7:41 IST
ಅಕ್ಷರ ಗಾತ್ರ

ನವದೆಹಲಿ: ದೇಶದಆರ್ಥಿಕತೆಯ ಮೂಲವು ಸುಭದ್ರವಾಗಿದ್ದು, ಹಣದುಬ್ಬರವನ್ನು ಸಮರ್ಥವಾಗಿ ನಿಯಂತ್ರಣಕ್ಕೆ ತರಲಾಗಿದೆ. ಭಾರತವು ಈಗ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಸಂಸತ್ತಿನಲ್ಲಿ ಶನಿವಾರ ಬಜೆಟ್ 2020-21 ಮಂಡಿಸುತ್ತಾ ಅವರು, 2014-19ರ ವೇಳೆಗೆ ಹಣಕಾಸು ಆಡಳಿತದಲ್ಲಿ ಸಾಕಷ್ಟು ಸುಧಾರಣೆಗಳನ್ನು ತರಲಾಗಿದ್ದು, ಆರ್ಥಿಕ ಪ್ರಗತಿ ದರವು ಶೇ. 7.4 ದಾಟಿದೆ ಮತ್ತು ಹಣದುಬ್ಬರವನ್ನು ಸರಾಸರಿ ಶೇ. 4.5ಕ್ಕೆ ನಿಯಂತ್ರಿಸಲಾಗಿದೆ ಎಂದು ಹೇಳಿದರು.

ಆದಾಯ ಹೆಚ್ಚಳಕ್ಕೆ ಹಾಗೂ ಜನರ ಖರೀದಿ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದರು.

ಜಿಎಸ್‌ಟಿ ಎಂಬುದು ಐತಿಹಾಸಿಕ ಸುಧಾರಣಾ ಕ್ರಮವಾಗಿದ್ದು, ಅದು ದೇಶವನ್ನು ಆರ್ಥಿಕವಾಗಿ ಏಕೀಕರಿಸಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT