ಸ್ಟಾರ್ಟ್ ಅಪ್‌ಗಳಿಗೆ ಬಜೆಟ್‌ನಲ್ಲಿ ಮತ್ತೊಂದು ವರ್ಷ ತೆರಿಗೆ ವಿನಾಯಿತಿ

ನವದೆಹಲಿ: ಯುವ ಉದ್ಯಮಿಗಳನ್ನು ಉತ್ತೇಜಿಸಲು ತೆರಿಗೆ ಪ್ರೋತ್ಸಾಹಕಗಳನ್ನು ನೀಡಲು ಅರ್ಹ ಸ್ಟಾರ್ಟ್ಅಪ್‌ಗಳ ಸಂಯೋಜನೆ ಅವಧಿಯನ್ನು 2024 ರ ಮಾರ್ಚ್ 31 ರವರೆಗೆ ವಿಸ್ತರಿಸಲು ಸರ್ಕಾರ ಬುಧವಾರ ಪ್ರಸ್ತಾಪಿಸಿದೆ.
ನಷ್ಟ ಮುಂದುವರಿಸುವ ಲಾಭವನ್ನು 10 ವರ್ಷಗಳವರೆಗೆ ವಿಸ್ತರಿಸುವ ಮೂಲಕ ಸ್ಟಾರ್ಟ್ಅಪ್‌ಗಳಿಗೆ ನಿಯಮಾವಳಿಗಳನ್ನು ಸರಾಗಗೊಳಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದರು.
‘ಸ್ಟಾರ್ಟ್ಅಪ್‌ಗಳ ಷೇರುದಾರರನ್ನು ಸಂಯೋಜಿಸುವ ಏಳು ವರ್ಷಗಳಿಂದ ಹತ್ತು ವರ್ಷಗಳಿಗೆ ಬದಲಾಯಿಸುವಲ್ಲಿನ ನಷ್ಟದ ಲಾಭವನ್ನು ಒದಗಿಸಲಾಗುವುದು’ ಎಂದು ಅವರು ಘೋಷಿಸಿದರು.
2023ರ ಮಾರ್ಚ್ 31ಕ್ಕೂ ಮೊದಲು ಸ್ಥಾಪನೆಯಾದ ಅರ್ಹ ಸ್ಟಾರ್ಟ್ಅಪ್‌ಗಳಿಗೆ ಸಂಯೋಜನೆಯಿಂದ ಹತ್ತು ವರ್ಷಗಳಲ್ಲಿ ಸತತ ಮೂರು ವರ್ಷಗಳವರೆಗೆ ತೆರಿಗೆ ಪ್ರೋತ್ಸಾಹ ನೀಡಲಾಗಿದೆ.
2016ರ ಏಪ್ರಿಲ್ 1 ರಂದು ಅಥವಾ ನಂತರ ಸಂಯೋಜಿತವಾದ ಸ್ಟಾರ್ಟ್ಅಪ್‌ಗಳು ಆದಾಯ ತೆರಿಗೆ ವಿನಾಯಿತಿಗೆ ಅರ್ಜಿ ಸಲ್ಲಿಸಬಹುದು.
ಅಂತರ ಸಚಿವಾಲಯದ ಮಂಡಳಿ ಪ್ರಮಾಣಪತ್ರ ನೀಡಲಾದ ಮಾನ್ಯತೆ ಪಡೆದ ಸ್ಟಾರ್ಟ್ಅಪ್‌ಗಳು ಸಂಯೋಜನೆಗೊಂಡ ನಂತರ 10 ವರ್ಷಗಳಲ್ಲಿ ಸತತ ಮೂರು ವರ್ಷಗಳವರೆಗೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ.
ದೇಶದಲ್ಲಿ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸಲು ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದೆ.
2022ರ ನವೆಂಬರ್ ವರೆಗೆ 84,000 ಕ್ಕೂ ಹೆಚ್ಚು ಸ್ಟಾರ್ಟ್ಅಪ್‌ಗಳು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯಲ್ಲಿ (ಡಿಪಿಐಐಟಿ) ನೋಂದಾಯಿಸಲ್ಪಟ್ಟಿವೆ. ಇವು ಸ್ಟಾರ್ಟ್ಅಪ್ ಇಂಡಿಯಾ ಉಪಕ್ರಮದ ಅಡಿ ಘೋಷಿಸಲಾದ ಆದಾಯ ತೆರಿಗೆ ಸೇರಿದಂತೆ ಕೆಲವು ತೆರಿಗೆ ಪ್ರೋತ್ಸಾಹಕಗಳನ್ನು ಪಡೆಯಬಹುದು.
ಇವುಗಳನ್ನೂ ಓದಿ
ಇಲ್ಲಿದೆ ಕೇಂದ್ರ ಬಜೆಟ್ನ ಸಂಪೂರ್ಣ ಮಾಹಿತಿ Live
Union Budget 2023 highlights: ಕೇಂದ್ರ ಬಜೆಟ್ ಮುಖ್ಯಾಂಶಗಳು
Union Budget 2023: ಮಹಿಳೆಯರಿಗೆ ಹೊಸ ಉಳಿತಾಯ ಯೋಜನೆ ಘೋಷಣೆ
ಸಂದರ್ಶಕರ ಗ್ಯಾಲರಿಯಲ್ಲಿ ಕುಳಿತು ಬಜೆಟ್ ವೀಕ್ಷಿಸಿದ ನಿರ್ಮಲಾ ಪುತ್ರಿ ವಾಂಗ್ಮಾಯಿ
Budget 2023| ಏಕಲವ್ಯ ವಸತಿ ಶಾಲೆಗಳಿಗೆ 38,800 ಶಿಕ್ಷಕರು, ಸಿಬ್ಬಂದಿ ನೇಮಕ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.