ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಕೇಂದ್ರ ಬಜೆಟ್‌ 2020: ಪ್ರಜಾವಾಣಿ ವಿಶ್ಲೇಷಣೆ

Last Updated 1 ಫೆಬ್ರುವರಿ 2020, 11:05 IST
ಅಕ್ಷರ ಗಾತ್ರ

ಈ ಬಾರಿಯೂ ಆದಾಯ ತೆರಿಗೆ ಕಡಿತಗೊಳಿಸಲಾಗಿದೆ. ಇದರಿಂದ ಯಾರಿಗೆಲ್ಲ ಲಾಭ ದೊರೆತಿದೆ. ಸಾಮಾನ್ಯ ಜನರಿಗೆ ದೊರಕಿದ್ದೇನು.. ? ಇದೆಲ್ಲದರ ಬಗ್ಗೆ ವಿಶ್ಲೇಷಣೆ ಮಾಡುತ್ತಿದ್ದಾರೆ ತೆರಿಗೆ ಸಲಹೆಗಾರ ಆರ್‌.ಜಿ ಮುರಳೀಧರ್ ಮತ್ತು ಪ್ರಜಾವಾಣಿ ವಾಣಿಜ್ಯ ವಿಭಾಗದ ಕೇಶವ ಜಿಂಗಾಡೆ.


* ಅಸಾಮಾನ್ಯ ಪರಿಸ್ಥಿತಿಯಲ್ಲಿ ಮಂಡನೆಯಾಗಿರುವ ಬಜೆಟ್‌; ಆರ್ಥಿಕತೆ ಮಂದಗತಿಯಲ್ಲಿ ಮಂಡನೆಯಾಗಿದೆ...ಹೇಗಿದೆ ಬಜೆಟ್‌?

ಬಹಳ ಪ್ರಯತ್ನ ಆಗಿದೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಸಂದಿಗ್ಧ ಬಜೆಟ್‌ ಮಂಡನೆಯಾಗಿದೆ. ಒಂದು ದಿನಕ್ಕೆ ಇದನ್ನು ಸೀಮಿತಗೊಳಿಸಲಾಗುತ್ತದೆ. ಷೇರುಪೇಟೆ ಏರಿಳಿತಗಳನ್ನು ಇದರೊಂದಿಗೆ ಸೇರಿಸಿ ಮಾತನಾಡಲಾಗುತ್ತದೆ. ಆದರೆ, ಅದು ಹೂಡಿಕೆ ಮಾಡುವ ಮತ್ತು ಕೊಳ್ಳುವ ಸಾಮರ್ಥ್ಯವನ್ನು ಆಧರಿಸಿರುತ್ತದೆ.

* ಸರಕು ಮತ್ತು ಸೇವೆ ಬೇಡಿಕೆ ಹೆಚ್ಚಳಕ್ಕೆ ಜನರ ಕಿಸೆಯಲ್ಲಿ ಹಣ ಹೆಚ್ಚಿಸುವುದು ಅಗತ್ಯ ಎನ್ನಲಾಗಿತ್ತು. ಅದು ಸಾಧ್ಯವಾಗಲಿದೆಯೇ?

ಈಗ ಉದ್ಯೋಗ ಇಲ್ಲ ಹಾಗೂ ಯೋಗ್ಯತೆಗೆ ಅನುಸಾರ ಸಂಬಳ ಸಿಗುತ್ತಿಲ್ಲ. ಬೇಡಿಕೆ ಹೆಚ್ಚಿಸುವಂತೆ ಮಾಡುವ ಪ್ರಯತ್ನ ಮಾಡಲಾಗಿದೆ.


ಇನ್ನಷ್ಟು ವಿವರಣೆಗಳಿಗಾಗಿ ಭೇಟಿ ನೀಡಿ:www.prajavani.net/budget-2020

* ನಮ್ಮಲ್ಲಿ 'ಚಿಕ್ಕಪೇಟೆ' ಇರುವಂತೆ ಜಾಗತಿಕ ಮಟ್ಟದಲ್ಲಿ 'ಚೀನಾ' ಎಂಬ ಮಾರುಕಟ್ಟೆ. ಚೀನಾ ಮಾರುಕಟ್ಟೆ ಕುಸಿಯುತ್ತಿದೆ, ಅಮೆರಿಕದಲ್ಲಿ ಅನಿಶ್ಚಿತತೆ ಇದೆ; ಇವು ನಮ್ಮ ಆರ್ಥಿಕತೆಗೂ ಪರಿಣಾಮ ಬೀರುತ್ತವೆ. ತೈಲ ಬೆಲೆ ಭೂತವಾಗಿ ಕಾಡುತ್ತಿದೆ. ಕ್ಷಣಕ್ಷಣವು ಡಾಲರ್‌ ಲೆಕ್ಕದಲ್ಲಿ ಖರ್ಚು ಮಾಡುತ್ತಿದ್ದೇವೆ. ಈ ಬಜೆಟ್‌ನಲ್ಲಿ ಒಳಹರಿವು ಮತ್ತು ಹೊರಹರಿವಿನ ಬಗ್ಗೆ ನಿಖರವಾಗಿ ತಿಳಿಸಿಲ್ಲ. ಎಲ್ಲವನ್ನೂ ಭರವಸೆ ರೂಪದಲ್ಲೇ ತಿಳಿಸಲಾಗಿದೆ.

ಜಿಎಸ್‌ಟಿಯಿಂದ ₹ 1.40 ಲಕ್ಷ ಕೋಟಿ ನಿರೀಕ್ಷಿಸಲಾಗಿತ್ತು. ಆದರೆ, ತೆರಿಗೆ ಸಂಗ್ರಹ ₹ 90 ಸಾವಿರ ಕೋಟಿ ದಾಟಲಿಲ್ಲ. ಇದರೊಂದಿಗೆ ಆದಾಯ ತೆರಿಗೆ ಕಡಿತಗೊಳಿಸಲಾಗಿದೆ. ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆ. ಬ್ಯಾಂಕ್‌ಗಳು ನೆಲಕಚ್ಚುವ ಸ್ಥಿತಿ ತಲುಪಿವೆ; ಇದರಿಂದ ಆದಾಯ ತೆರಿಗೆ ಸಂಗ್ರಹವಂತೂ ಕುಸಿಯಲಿದೆ.

ಈಗ ಸರ್ಕಾರ ಮಾಡಬೇಕಿರುವುದು ಜನರ ಕೊಳ್ಳುವ ಸಾಮರ್ಥ್ಯ ಹೆಚ್ಚಿಸುವುದು. ವಿತ್ತೀಯ ಕೊರತೆ ಸಡಿಲ ಗೊಳಿಸುವುದು, ಕನಿಷ್ಠ ಒಂದು ವರ್ಷದ ವರೆಗೆ ಪಾಲಿಸಬೇಕಿತ್ತು.

ವಾಜಪೇಯಿ ಸರ್ಕಾರ ನೆನಪಿಸಿಕೊಳ್ಳಬೇಕು:

ಅಟಲ್‌ ಬಿಹಾರಿ ವಾಜಪೇಯಿ ಅವರು ತೆಗೆದುಕೊಂಡ ಕ್ರಮವನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಗೋಲ್ಡನ್‌ ಕ್ವಾಡ್ರಿಲ್ಯಾಟರಲ್‌ ಯೋಜನೆ ಮಾಡಿದರು, ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ರಸ್ತೆ ಮಡಿದರು. ಇದರಿಂದ ಹೊಸ ಆವಿಷ್ಕಾರಗಳು ನಡೆದವು, ಉದ್ಯೋಗ ಸೃಷ್ಟಿಯಾಯಿತು, ಹೊಟೇಲ್‌ಗಳು ಬಂದವು, ಆರ್ಥಿಕತೆಯಲ್ಲಿ ಬಹಳಷ್ಟು ಚೇತರಿಕೆ ಉಂಟಾಯಿತು.

* ಬೆಂಗಳೂರು ಉಪನಗರ ರೈಲು ಯೋಜನೆ; ಇದರ ಪರಿಣಾಮಗಳು

ರಸ್ತೆ ದಟ್ಟಣೆಯಿಂದ ಉತ್ಪಾದನೆ ಕಡಿಮೆಯಾಗಿದೆ. ಹಲವು ವಿದೇಶಿ ಮಾಧ್ಯಮಗಳ ಪ್ರಕಾರ, ಬೆಂಗಳೂರಿನಲ್ಲಿ ಕೌಡ್‌ ಕಂಪ್ಯೂಟಿಂಗ್‌ ಮತ್ತು ಕ್ವಾಂಟಮ್‌ ಕಂಪ್ಯೂಟಿಂಗ್‌ ಬೆಳವಣಿಗೆ ಬಹಳಷ್ಟು ಅವಕಾಶವಿದೆ. ಇದರಿಂದ ಟ್ರಾಫಿಕ್‌ ಸಮಸ್ಯೆಗೂ ಪರಿಹಾರ ಸಿಗಬಹುದಾಗಿದೆ. ಇಲ್ಲಿನವರೆಗೇ ಹೆಚ್ಚಿನ ಉದ್ಯೋಗ ಸಿಕ್ಕಿದರೆ ಉತ್ತಮ.

* ಆದಾಯ ತೆರಿಗೆ ಕಡಿತ ಮಾಡಲಾಗಿದೆ. ಇದರಿಂದ ಜನರ ಕಿಸೆಗೆ ದುಡ್ಡು ಹರಿದು ಬರದಲಿದೆಯೇ?

ಉದಾಯ ಖರ್ಚು ಸಾಧ್ಯತೆ ಇಲ್ಲ. ಜನರು ಕಿಸೆಯಲ್ಲಿ ದುಡ್ಡು ಇಟ್ಟು ಕೊಳ್ಳಬೇಕೋ ಬೇಡವೋ ಎಂದು ಯೋಚಿಸುವಂತೆ ಮಾಡಿದ್ದಾರೆ. ₹ 10 ಲಕ್ಷಕ್ಕಿಂತ ಅಧಿಕ ಆದಾಯ ಹೊಂದಿರುವವರಿಗೆ ಖರ್ಚಿಗೆ ಅವಕಾಶ ಸಿಗಬಹುದು. ಹಿಂದೆ ಅವರಿಗೆ ಹೆಚ್ಚು ವಿನಾಯಿಯಿತಿ ಇರಲಿಲ್ಲ. ಈಗ ತೆರಿಗೆ ಕಡಿಗೊಳಿಸುವುದರಿಂದ ದುಡ್ಡು ಹರಿಯುವ ಸಾಧ್ಯತೆಯಿದೆ. ಪ್ರಸ್ತುತ ಬಹುಬೇಗ ₹ 10 ಲಕ್ಷ ಮಿತಿಯನ್ನು ದಾಟುತ್ತಿದ್ದಾರೆ, ಆದರೆ ಆದಾಯ ₹ 10 ಲಕ್ಷ ಒಳಗಿರುವವರ ಸಂಖ್ಯೆ ದೊಡ್ಡದಿದೆ. ಹೆಚ್ಚು ಆದಾಯ ಹೊಂದಿರುವವರಿಂದ ಹೆಚ್ಚು ಆದಾಯ ಪಡೆಯುತ್ತಿದ್ದೇವೆ. ಕಡಿಮೆ ಆದಾಯ ಹೊಂದಿರುವವರಿಂದ ನಿರಂತರ ತೆರಿಗೆ ಸಂಗ್ರಹ ಆಗುತ್ತಿದೆ.

* ₹ 15 ಲಕ್ಷ ಕೋಟಿ ಸಾಲ ಕೊಡಲು ಮುಂದಾಗಿರುವ ಸರ್ಕಾರ

ಆದರೆ, ಎಲ್ಲಿಂದ ತಂದು ಕೊಡುತ್ತೇವೆ ಎಂಬುದನ್ನು ತಿಳಿಸಿಲ್ಲ. ತೋರಿಕೆಯ ರೂಪದಲ್ಲಿ ಹೇಳಿದರೆ ಪ್ರಯೋಜನವಿಲ್ಲ. ಜನರಿಗೆ ತಲುಪುತ್ತಿಲ್ಲ.

ವಾಸ್ತವದ ಆದಾಯ ಮತ್ತು ಖರ್ಚು ಗಮನಿಸಿ ಯೋಜನೆ ರೂಪಿಸಬೇಕು. ಜನಪ್ರಿಯ ಬಜೆಟ್‌ ನಿರೀಕ್ಷಿಸಿದರೆ ಅಂಥದ್ದೇ ಬಜೆಟ್‌ ನೀಡುತ್ತಾರೆ. ಯೋಜನೆಗಳಿಗಾಗಿ ಹೆಚ್ಚು ಸಾಲ ಮಾಡಲಾಗುತ್ತದೆ.

* ಎಲ್ಐಸಿ ಸರ್ಕಾರದ ಪಾಲಿನ ಬಹುಭಾಗ ಐಪಿಒ ನೀಡಿಕೆ ಮೂಲಕ ಮಾರಾಟಕ್ಕೆ ಸಿದ್ಧತೆ

ಮನೆ ಮಠ ಮಾರಿ ಖರ್ಚು ಮಾಡುವ ಲೆಕ್ಕ ಇದು. ಆದರೆ, ಇಂದಿನ ಪೀಳಿಗೆ ಯೋಚಿಸುವುದು ಬೇರೆ. ಸರ್ಕಾರ ಸಂಸ್ಥೆ ಪಾಲುದಾರಿಕೆ ಮಾರಾಟ ಮಾಡುವ ಬಗ್ಗೆ ತಪ್ಪು ತಿಳಿಯುತ್ತಿಲ್ಲ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳೆಂದರೆ, ಸಾರ್ವಜನಿಕ ವಲಯ ಸಂಸ್ಥೆಗಳೆಂದರೆ ಹಿಂದೆ ಭಾವನಾತ್ಮಕ ಸಂಬಂಧವಿತ್ತು.

ಸಾರ್ವಜನಿಕ ವಲಯದ ಸಂಸ್ಥೆಗಳು ಬಹಳಷ್ಟು ಜನರಿಗೆ ಉದ್ಯೋಗ ನೀಡಿದೆ. ಅದರಿಂದ ಅವರ ಸಂಸಾರ ಬೆಳೆಯುತ್ತಿದೆ. ಸಂಸ್ಥೆ ಮಾರಾಟ ಮಾಡುವುದರಿಂದ ಮುಂದಿನ ದಿನಗಳಲ್ಲಿ ಹೊಡೆತ ಬೀಳಲಿದೆ.

ಜನರು ಉಳಿತಾಯ ಮಾಡಲು ಯೋಚಿಸಿದರೆ ಅವರಿಗೆ ತೆರಿಗೆ ಹೊರೆಯಾಗಬಾರದು. ಜನರು ತೆರಿಗೆ ತಪ್ಪಿಸಿಕೊಳ್ಳದೆ ಪಾವತಿಸಬೇಕು. ಇದರಿಂದ ಸಮತೋಲನ ಸಾಧ್ಯವಾಗುತ್ತದೆ. ದೆಹಲಿ ಸರ್ಕಾರ ಹಲವು ಸುಧಾರಣೆಗಳನ್ನು ತಂದಿದೆ, ಉಚಿತ ವಿದ್ಯುತ್‌, ನೀರು ನೀಡುತ್ತಿದೆ. ಕೇಂದ್ರದ ಯೋಜನೆಗಳ ಹೊರತಾಗಿಯೂ ಸುಧಾರಣೆಗಳನ್ನು ತರಲು ಸಾಧ್ಯವಿದೆ.

* ಸರಾಸರಿ ವಯಸ್ಸು 25 ವರ್ಷ. ಈಗ ಆರ್ಥಿಕತೆ ಬೆಳೆಯಲೇಬೇಕಿದೆ. ಕುಸಿದು ಮೇಲೆ ಏರಲೇ ಬೇಕು. ಬೇಡಿಕೆ ಹೆಚ್ಚಲಿದೆ. ಸರ್ಕಾರ ಸಾಲ ಕೊಡಬೇಕಿದೆ, ಮರು ಪಾವತಿಗೆ ಸಡಿಲ ವ್ಯವಸ್ಥೆ ಆಗಬೇಕಿದೆ. ಬೆಳವಣಿಗೆಯಂತೂ ಖಚಿತ.

* ಸಂಪತ್ತು ಸೃಷ್ಟಿ: ಇನ್ಫೊಸಿಸ್‌, ಬಯೋಕಾನ್‌ ಅಂತ ಸಂಸ್ಥೆಗಳು ಸಾಕಷ್ಟು ದೊಡ್ಡ ಸಂಪತ್ತು ಸೃಷ್ಟಿಸಿದರು. ಅವರು ಉದಾಹಣೆಯಾಗುತ್ತಾರೆ.

* ಜಿಎಸ್‌ಟಿ ವಿಚಾರ: ಹೇಳುವಷ್ಟು ಸುಲಭ ಇಲ್ಲ. ಇನ್ನೂ ಎರಡು ವರ್ಷ ಬೇಕು ಸರಳಗೊಳ್ಳಲು. ಷೇರುಪೇಟೆ ಲಾಭಾಂಶ ವಿತರಣೆಯಲ್ಲಿ ತೆರಿಗೆ ಕಡಿತಗೊಳಿಸಲಾಗಿದೆ. ಆದರೆ, ಹೂಡಿಕೆದಾರ ಯಾವ ತೆರಿಗೆ ಆಯ್ದುಕೊಳ್ಳಬೇಕು ಎಂದು ನಿರ್ಧರಿಸಿಕೊಳ್ಳಲು ಲಾಭಾಂಶ ಹಂಚಿಕೆ ಘೋಷಣೆ ಆಗುವವರೆಗೂ ಕಾಯಬೇಕಾಗುತ್ತದೆ.

* ಭರವಸೆ ಈಡೇರುವ ಬಜೆಟ್‌ ಆಗಲು ಇನ್ನೂ ಎರಡು ವರ್ಷ ಆಗಬೇಕು. ಈಗ ಸಮತಟ್ಟು ಸ್ಥಳದಲ್ಲಿದ್ದೇವೆ, ಮುಂದೆ ಮೇಲೆ ಏರಬೇಕಿದೆ.

* ಆದಾಯ ತೆರಿಗೆ ವ್ಯವಸ್ಥೆ ಐಚ್ಛಿಕ ತಂತ್ರ

ವಯಸ್ಸು ಕಡಿಮೆ ಇದ್ದವರು ಆಗಿದ್ದರೆ ನೀವು ಆದಾಯ ವಿನಾಯಿತಿಗೆ ಹೋಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT