ಬುಧವಾರ, ಜೂನ್ 23, 2021
30 °C

ವಸತಿ: ತೆರಿಗೆ ರಿಯಾಯಿತಿ ವಿಸ್ತರಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಸರ್ವರಿಗೂ ಸೂರು’ ಗುರಿಯ ಸಾಕಾರ ಮತ್ತು ಕೈಗೆಟುಕುವ ದರದಲ್ಲಿ ವಸತಿ ಒದಗಿಸುವ ಉದ್ದೇಶ ಸಾಧನೆಗೆ ₹ 1.5 ಲಕ್ಷದವರೆಗಿನ ಸಾಲದ ಮೇಲಿನ ಬಡ್ಡಿಗೆ ನೀಡಿದ್ದ ರಿಯಾಯಿತಿಯನ್ನು ಇನ್ನೂ ಒಂದು ವರ್ಷದ ಅವಧಿಗೆ ವಿಸ್ತರಿಸಲಾಗಿದೆ.

ಮಾರ್ಚ್‌ 31, 2020 ಅಥವಾ ಅದಕ್ಕೂ ಮೊದಲು ಮಂಜೂರು ಮಾಡಲಾಗಿರುವ ಗೃಹ ಸಾಲಗಳಿಗೆ ಅನ್ವಯಿಸಿ ಈ ರಿಯಾಯಿತಿ ಸೌಲಭ್ಯವು ಸಿಗಲಿದೆ. 

ಕೈಗೆಟುಕುವ ದರದ ವಸತಿಯನ್ನು ಖರೀದಿಸಲು ಪಡೆಯಲಾಗಿರುವ ಗೃಹಸಾಲಕ್ಕೆ ಪಾವತಿಸಿದ ಬಡ್ಡಿಗೆ ಸಂಬಂಧಿಸಿ ₹ 1.5 ಲಕ್ಷದವರೆಗೂ ಹೆಚ್ಚುವರಿ ತೆರಿಗೆ ರಿಯಾಯಿತಿ ನೀಡುವುದು ಯೋಜನೆಯ ಉದ್ದೇಶ. ಅಂತೆಯೇ, ಇಂಥ ವಸತಿ ಯೋಜನೆಗಳಿಗೆ ಸಂಬಂಧಿಸಿ ರಿಯಲ್‌ ಎಸ್ಟೇಟ್‌ ಸಂಸ್ಥೆಗಳು ಗಳಿಸಿದ ಲಾಭಾಂಶದ ಮೇಲೂ ಒಂದು ವರ್ಷದ ಅವಧಿಗೆ ತೆರಿಗೆ ರಿಯಾಯಿತಿಯನ್ನು ನೀಡಲಾಗುತ್ತದೆ.

ರಿಯಲ್‌ ಎಸ್ಟೇಟ್‌ ಸಂಸ್ಥೆಗಳು ಮಾರ್ಚ್ 31, 2020ರ ಒಳಗೆ ಅನುಮೋದನೆಯನ್ನು ಪಡೆಯುವಂತಹ ವಸತಿ ಯೋಜನೆಗಳಿಗೆ ಈ ತೆರಿಗೆ ರಿಯಾಯಿತಿ ಅವಧಿ ವಿಸ್ತರಣೆ ಸೌಲಭ್ಯವು ಅನ್ವಯವಾಗಲಿದೆ.

₹ 1.5 ಲಕ್ಷದವರೆಗಿನ ಸಾಲದ ಮೇಲಿನ ಬಡ್ಡಿ ರಿಯಾಯಿತಿ ಇನ್ನೊಂದು ವರ್ಷ ಮುಂದುವರಿದಿರುವ ಕಾರಣ ರಿಯಲ್‌ ಎಸ್ಟೇಟ್‌ ಉದ್ಯಮ ಚೇತರಿಕೆ ಪಡೆದುಕೊಳ್ಳಲಿದೆ ಎನ್ನುವುದು ಸರ್ಕಾರದ ಆಶಯವಾಗಿದೆ. ‘ಬಡವರು ಮನೆ ಕಟ್ಟಿಕೊಳ್ಳಲು ಈ ರಿಯಾಯಿತಿ ನೆರವು ನೀಡಬಹುದು. ಆದರೆ, ರಿಯಲ್‌ ಎಸ್ಟೇಟ್‌ ಉದ್ಯಮದ ಒಟ್ಟಾರೆ ಪ್ರಗತಿಗೆ ಯಾವುದೇ ಕೊಡುಗೆಗಳು ಇಲ್ಲ’ ಎಂಬುದು ಉದ್ಯಮಿಗಳ ವಾದವಾಗಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು