ಮಂಗಳವಾರ, ಸೆಪ್ಟೆಂಬರ್ 22, 2020
25 °C
ಕೇಂದ್ರ ಸರ್ಕಾರದ ವಿಶೇಷ ನಗದು ಯೋಜನೆ

ಎನ್‌ಬಿಎಫ್‌ಸಿ, ಎಚ್‌ಎಫ್‌ಸಿಗಳಿಗೆ ‌₹ 6,400 ಕೋಟಿ ಮಂಜೂರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಿಶೇಷ ನಗದು ಯೋಜನೆಯಡಿ ಬ್ಯಾಂಕೇತರ ಹಣಕಾಸು ಕಂಪನಿ (ಎನ್‌ಬಿಎಫ್‌ಸಿ) ಮತ್ತು ಗೃಹ ಹಣಕಾಸು ಕಂಪನಿಗಳಿಗೆ (ಎಚ್‌ಎಫ್‌ಸಿ) ಒಟ್ಟಾರೆ ₹ 6,300 ಕೋಟಿ ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

₹ 20.97 ಲಕ್ಷ ಕೋಟಿ ಮೊತ್ತದ ‘ಆತ್ಮನಿರ್ಭರ ಭಾರತ’ ಪ್ಯಾಕೇಜ್‌ ಅಡಿಯಲ್ಲಿ ಜುಲೈ 1ರಂದು ₹ 30 ಸಾವಿರ ಕೋಟಿ ಮೊತ್ತದ ವಿಶೇಷ ನಗದು ಯೋಜನೆಗೆ ಚಾಲನೆ ನೀಡಲಾಗಿದೆ. ಎನ್‌ಬಿಎಫ್‌ಸಿ ಮತ್ತು ಎಚ್‌ಎಫ್‌ಸಿಗಳ ನಗದು ಸಮಸ್ಯಗಳನ್ನು ಬಗೆಹರಿಸುವುದು ಯೋಜನೆಯ ಮೂಲ ಉದ್ದೇಶವಾಗಿದೆ.

ಒಟ್ಟಾರೆ ₹ 11,037 ಕೋಟಿ ಮೊತ್ತದ ನೆರವಿಗಾಗಿ ಅರ್ಜಿ ಸಲ್ಲಿಕೆಯಾಗಿವೆ. ಅದರಲ್ಲಿ ಆಗಸ್ಟ್‌ 7ರವರೆಗೆ ₹ 6,399 ಕೋಟಿ ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಟ್ವೀಟರ್‌ನಲ್ಲಿ ತಿಳಿಸಿದ್ದಾರೆ.

ಐಎಲ್‌ಆ್ಯಂಡ್‌ಎಫ್‌ಸಿ ಸಮೂಹ ಸಂಸ್ಥೆಗಳು ಎನ್‌ಬಿಎಫ್‌ಸಿ ಮತ್ತು ಎಚ್‌ಎಫ್‌ಸಿಗಳಿಗೆ ಭಾರಿ ಮೊತ್ತದ ಸಾಲವನ್ನು ಬಾಕಿ ಉಳಿಸಿಕೊಂಡಿವೆ. ಇದರಿಂದಾಗಿ ಇವುಗಳು ನಗದು ಬಿಕ್ಕಟ್ಟು ಎದುರಿಸುವಂತಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು