ಭಾನುವಾರ, ಮೇ 29, 2022
31 °C

50 ನವೋದ್ಯಮಗಳಿಗಿದೆ ಯೂನಿಕಾರ್ನ್‌ ಆಗುವ ಸಾಮರ್ಥ್ಯ: ಪಿಡಬ್ಲ್ಯುಸಿ ಇಂಡಿಯಾ ಸಂಸ್ಥೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಭಾರತದಲ್ಲಿನ 50 ನವೋದ್ಯಮಗಳು 2022ರಲ್ಲಿ ಯೂನಿಕಾರ್ನ್‌ ಆಗುವ ಸಾಮರ್ಥ್ಯವನ್ನು ಹೊಂದಿವೆ ಎಂದು ಪಿಡಬ್ಲ್ಯುಸಿ ಇಂಡಿಯಾ ಸಂಸ್ಥೆಯು ಸೋಮವಾರ ತಿಳಿಸಿದೆ.

2022ರ ವರ್ಷಾಂತ್ಯದ ವೇಳೆಗೆ ಕನಿಷ್ಠ 100 ಯೂನಿಕಾರ್ನ್‌ಗಳು (₹ 7,500 ಕೋಟಿಗಿಂತ ಹೆಚ್ಚಿನ ಬಂಡವಾಳ ಮೌಲ್ಯ ಹೊಂದಿರುವ ನವೋದ್ಯಮ) ದೇಶದಲ್ಲಿ ಇರಲಿವೆ ಎಂದು ಹೇಳಿದೆ. 2021ರಲ್ಲಿ ಹೊಸದಾಗಿ 43 ನವೋದ್ಯಮಗಳು ಸೃಷ್ಟಿಯಾಗಿದ್ದು, ಯೂನಿಕಾರ್ನ್‌ಗಳ ಸಂಖ್ಯೆಯು 68ಕ್ಕೆ ತಲುಪಿದೆ.

ಅಕ್ಟೋಬರ್‌–ಡಿಸೆಂಬರ್ ತ್ರೈಮಾಸಿಕದಲ್ಲಿಯೇ ದೇಶದ ನವೋದ್ಯಮಗಳಲ್ಲಿ ₹ 74 ಸಾವಿರ ಕೋಟಿ ಹೂಡಿಕೆ ಆಗಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.

ಮಾರುಕಟ್ಟೆ ಪರಿಸ್ಥಿತಿಯು ನವೋದ್ಯಮಗಳಿಗೆ ಪೂರಕವಾಗಿದೆ. ಹೀಗಾಗಿ 2022ರ ಅಂತ್ಯದೊಳಗೆ ಯೂನಿಕಾರ್ನ್‌ಗಳ ಸಂಖ್ಯೆಯು 100ನ್ನು ದಾಟಲಿದೆ ಎಂದು ಸಂಸ್ಥೆಯ ನವೋದ್ಯಮಗಳ ಪಾಲುದಾರ ಅಮಿತ್‌ ನೌಕಾ ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು