ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬುಜಾ ಸಿಮೆಂಟ್ಸ್‌: ಅದಾನಿ ಕುಟುಂಬದ ಪಾಲು ಹೆಚ್ಚಳ

Published 17 ಏಪ್ರಿಲ್ 2024, 15:41 IST
Last Updated 17 ಏಪ್ರಿಲ್ 2024, 15:41 IST
ಅಕ್ಷರ ಗಾತ್ರ

ನವದೆಹಲಿ: ಉದ್ಯಮಿ ಗೌತಮ್‌ ಅದಾನಿ ಅವರ ಕುಟುಂಬವು ಅಂಬುಜಾ ಸಿಮೆಂಟ್ಸ್‌ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಂಪನಿಯಲ್ಲಿ ಹೆಚ್ಚುವರಿಯಾಗಿ ₹8,339 ಕೋಟಿಯನ್ನು ಹೂಡಿಕೆ ಮಾಡಿದೆ. 

‌ಇದರಿಂದ ಕಂಪನಿಯಲ್ಲಿ ಕುಟುಂಬದ ಷೇರುಗಳ ಮೇಲಿನ ಒಡೆತನವು ಶೇ 70.3ಕ್ಕೆ ಮುಟ್ಟಿದೆ. 

2022ರ ಅಕ್ಟೋಬರ್‌ನಲ್ಲಿ ಅದಾನಿ ಕುಟುಂಬವು ₹5 ಸಾವಿರ ಕೋಟಿ ಮತ್ತು ಪ್ರಸಕ್ತ ವರ್ಷದ ಮಾರ್ಚ್‌ನಲ್ಲಿ ₹6,661 ಕೋಟಿ ಹೂಡಿಕೆ ಮಾಡಿತ್ತು. ಈಗ ಹೂಡಿಕೆ ಮೊತ್ತವು ₹20 ಸಾವಿರ ಕೋಟಿಗೆ ಮುಟ್ಟಿದೆ ಎಂದು ಕಂಪನಿ ತಿಳಿಸಿದೆ.

ಕಳೆದ ವರ್ಷದ ಡಿಸೆಂಬರ್‌ ಅಂತ್ಯಕ್ಕೆ ಕಂಪನಿಯ ಒಟ್ಟು ಉತ್ಪಾದನಾ ಸಾಮರ್ಥ್ಯ 7.61 ಕೋಟಿ ಟನ್‌ ಆಗಿದೆ. ಇದನ್ನು 2028ರ ವೇಳೆಗೆ 14 ಕೋಟಿ ಟನ್‌ಗೆ ಹೆಚ್ಚಿಸಲು ಈ ಹೂಡಿಕೆಯು ನೆರವಾಗಲಿದೆ. ಜೊತೆಗೆ, ಕಂಪನಿಯ ಹಣಕಾಸು ಸ್ಥಿತಿ, ಸಾಮರ್ಥ್ಯ ಮತ್ತು ಬೆಳವಣಿಗೆ ಸಹಕಾರಿಯಾಗಲಿದೆ ಎಂದು ಕಂಪನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT