ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗರಬತ್ತಿ ವಹಿವಾಟು ಪ್ರಗತಿ

Last Updated 29 ಮಾರ್ಚ್ 2019, 17:16 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಸಕ್ತ ಹಣಕಾಸು ವರ್ಷದಲ್ಲಿ ಅಗರಬತ್ತಿ ಉದ್ಯಮದ ದೇಶಿ ವಹಿವಾಟು ಶೇ 8 ರಿಂದ 10ರಷ್ಟು ಬೆಳವಣಿಗೆ ಸಾಧಿಸಿದೆ.

‘ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿನ ವಹಿವಾಟು ಗಮನಾರ್ಹ ಏರಿಕೆ ಕಂಡಿದೆ’ ಎಂದು ಅಖಿಲಭಾರತ ಅಗರಬತ್ತಿ ಉತ್ಪಾದಕರ ಸಂಘದ (ಎಐಎಎಂಎ) ಅಧ್ಯಕ್ಷ ಶರತ್‍ಬಾಬು ಹೇಳಿದ್ದಾರೆ.

‘ದೇಶಿ ಅಗರಬತ್ತಿ ಉದ್ಯಮವು ಕಳೆದ ಒಂದು ವರ್ಷಾವಧಿಯಲ್ಲಿ ನಿರೀಕ್ಷೆ ಮೀರಿ ಪ್ರಗತಿ ಕಂಡಿದೆ. ಉದ್ದಿಮೆಗೆ ನೀಡಿರುವ ತೆರಿಗೆ ರಿಯಾಯ್ತಿಯ ಕಾರಣಕ್ಕೆ ಹೊಸಬರು ವಹಿವಾಟು ಪ್ರವೇಶಿಸಿದ್ದಾರೆ. ‘ಗ್ರಾಹಕರು ಸುಗಂಧದ್ರವ್ಯದತ್ತ ಹೆಚ್ಚು ಒಲವು ತೋರುತಿದ್ದಾರೆ. ಹೊಸ ಉತ್ಪನ್ನಗಳಾದ ಅಕ್ವಾ, ಲ್ಯಾವೆಂಡರ್, ಔದ್ ಮತ್ತು ಅಗರಬತ್ತಿ ಕೂಡಾ ಇದರಲ್ಲಿ ಸೇರಿವೆ. ಪ್ರೀಮಿಯಂ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅಧ್ಯಾತ್ಮ, ಧ್ಯಾನ ಸೇರಿದಂತೆ ವಿವಿಧ ಉದ್ದೇಶಗಳಿಗೆ ಅಗರಬತ್ತಿ ಬಳಕೆಯಾಗುತ್ತಿದೆ. ಧಾರ್ಮಿಕ ಆಚರಣೆಗಳು ಉದ್ಯಮಕ್ಕೆ ಉತ್ತೇಜನ ನೀಡುತ್ತಿವೆ. ಇತ್ತೀಚೆಗೆ ನಡೆದ ಕುಂಭಮೇಳವು ವಹಿವಾಟು ಹೆಚ್ಚಳಕ್ಕೆ ನೆರವಾಗಿದೆ.’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT