ಏರ್‌ಇಂಡಿಯಾ ಪ್ರಯಾಣಿಕ ವರಮಾನ ಶೇ 20ರಷ್ಟು ಹೆಚ್ಚಳ

7

ಏರ್‌ಇಂಡಿಯಾ ಪ್ರಯಾಣಿಕ ವರಮಾನ ಶೇ 20ರಷ್ಟು ಹೆಚ್ಚಳ

Published:
Updated:
Prajavani

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಏರ್‌ ಇಂಡಿಯಾ ಸಂಸ್ಥೆಯ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ 4ರಷ್ಟು ಅಲ್ಪ ಏರಿಕೆ ಆಗಿದೆ. ಆದರೆ ಪ್ರಯಾಣಿಕ ವರಮಾನ ಶೇ 20ರಷ್ಟು ವೃದ್ಧಿಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಯಾಣಿಕರ ಸಂಖ್ಯೆ 55.27 ಲಕ್ಷದಿಂದ 53.28 ಲಕ್ಷಕ್ಕೆ ಅಲ್ಪ ಹೆಚ್ಚಳವಾಗಿದೆ. ಆದರೆ, ವಿಮಾನಗಳ ಹಾರಾಟದ ಸಂಖ್ಯೆಯಲ್ಲಿನ ಹೆಚ್ಚಳದಿಂದ ಪ್ರಯಾಣಿಕರಿಂದ ಬರುವ ವರಮಾನ ₹ 4,615 ಕೋಟಿಯಿಂದ ₹ 5,538 ಕೋಟಿಗೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ. ಮೂರನೇ ತ್ರೈಮಾಸಿಕದಲ್ಲಿ ಹೊಸದಾಗಿ 15 ವಿಮಾನಗಳು ಸೇವೆಯನ್ನು ಆರಂಭಿಸಿವೆ.

‘ಸಂಸ್ಥೆಯ ಭವಿಷ್ಯದ ವರಮಾನದಿಂದ ಸಾಲದ ಹೊರೆಯನ್ನು ತಗ್ಗಿಸಲು ಸಾಧ್ಯವಿಲ್ಲ. ಈ ಸಮಸ್ಯೆಯನ್ನು ಸಂಸ್ಥೆಯು ಎದುರಿಸುತ್ತಿರುವ ಸದ್ಯದ ಸವಾಲುಗಳಿಂದ ಪ್ರತ್ಯೇಕಿಸಲಾಗುವುದು’ ಎಂದು ನಾಗರಿಕ ವಿಮಾನಯಾನ ಸಚಿವ ಸುರೇಶ್‌ ಪ್ರಭು ತಿಳಿಸಿದ್ದಾರೆ.

‘ಸಂಸ್ಥೆಯು ಲಾಭ ಮಾಡುವ ಸ್ಥಿತಿಗೆ ಬರುವುದು ಕಷ್ಟ. ಸಾಲದ ಮೇಲಿನ ಬಡ್ಡಿದರ ಹೆಚ್ಚಿಗೆ ಇದೆ. ಹೀಗಾಗಿ ಸೇವೆಯಿಂದ ಬರುವ ವರಮಾನದಲ್ಲಿ ಸಾಲದ ಹೊರೆ ತಗ್ಗಿಸಲು ಆಗುವುದಿಲ್ಲ. ಸಾಲದ ಸಮಸ್ಯೆ ಬಗೆಹರಿಸುವ ಬಗ್ಗೆ ಹಣಕಾಸು ಸಚಿವಾಲಯದೊಂದಿಗೆ ಚರ್ಚೆ ನಡೆಸಲಾಗುತ್ತಿದೆ’ ಎಂದೂ ಹೇಳಿದ್ದಾರೆ.

ವರಮಾನದ ವಿವರ
* 65% -ಅಂತರರಾಷ್ಟ್ರೀಯ ಸೇವೆಯಿಂದ ಗಳಿಸುತ್ತಿರುವ ವರಮಾನದ ಪ್ರಮಾಣ
* 35 % -ದೇಶಿ ಸೇವೆಯಿಂದ ಗಳಿಸುತ್ತಿರುವ ವರಮಾನದ ಪ್ರಮಾಣ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !