ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತದ ವ್ಯಾಪಾರ ಪರಿಸರಕ್ಕೆ ಹೊಂದಿಕೊಳ್ಳುವ ಅಗತ್ಯವಿದೆ: ಟಿಎಐಟಿಆರ್‌ಎ

Published 8 ಜುಲೈ 2024, 14:24 IST
Last Updated 8 ಜುಲೈ 2024, 14:24 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ತೈವಾನ್‌ನ ಸಂಸ್ಥೆಗಳು ಸೇರಿದಂತೆ ಎಲ್ಲ ವಿದೇಶಿ ಕಂಪನಿಗಳು ಭಾರತದ ವ್ಯಾಪಾರಿ ಪರಿಸರಕ್ಕೆ ಹೊಂದಿಕೊಳ್ಳುವ ಅಗತ್ಯವಿದೆ ಎಂದು ತೈವಾನ್ ಎಕ್ಸ್‌ಟರ್ನಲ್ ಟ್ರೇಡ್ ಡೆವಲಪ್‌ಮೆಂಟ್ ಕೌನ್ಸಿಲ್ (ಟಿಎಐಟಿಆರ್‌ಎ) ಅಧ್ಯಕ್ಷ ಜೇಮ್ಸ್ ಸಿ.ಎಫ್. ಹುವಾಂಗ್ ಸೋಮವಾರ ಹೇಳಿದ್ದಾರೆ.

ತಮಿಳುನಾಡಿನಲ್ಲಿ ಇರುವ ಫಾಕ್ಸ್‌ಕಾನ್‌ ಘಟಕದಲ್ಲಿ ವಿವಾಹಿತೆಯರ ನೇಮಕಾತಿ ವಿಷಯದಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎನ್ನುವ ಆರೋಪದ ಇರುವುದರಿಂದ, ಟಿಎಐಟಿಆರ್‌ಎ ಈ ಹೇಳಿಕೆ ನೀಡಿದೆ.

ತೈವಾನ್‌ನ ಪ್ರತಿ ಕಂಪನಿಯು ಭಾರತಕ್ಕೆ ಉತ್ತಮ ನಂಬಿಕೆಯೊಂದಿಗೆ ಬರುತ್ತದೆ. ಎಲ್ಲ ನೌಕರರ ಹಕ್ಕುಗಳ ರಕ್ಷಣೆಗೆ ತೈವಾನ್ ನಿರಂತರವಾಗಿ ನಿಯಮಗಳನ್ನು ಪಾಲಿಸುತ್ತದೆ ಎಂದು ಹುವಾಂಗ್ ಹೇಳಿದ್ದಾರೆ.

ತೈವಾನ್ ಉದ್ಯಮವು, ಭಾರತದ ಆರ್ಥಿಕತೆಯ ಅಭಿವೃದ್ಧಿಗೆ ಕೊಡುಗೆ ನೀಡಲು ಉತ್ಸುಕವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ‘ಮೇಕ್ ಇನ್ ಇಂಡಿಯಾ’ ಮತ್ತು ‘ಡಿಜಿಟಲ್ ಇಂಡಿಯಾ’ ನೀತಿಗಳನ್ನು ಬೆಂಬಲಿಸುತ್ತದೆ ಎಂದಿದ್ದಾರೆ.

ಭಾರತ ಮತ್ತು ತೈವಾನ್ ನಡುವಿನ ದ್ವಿಪಕ್ಷೀಯ ವ್ಯಾಪಾರವು 2023ರಲ್ಲಿ ₹66,802 ಕೋಟಿ ಆಗಿದ್ದು, ಈ ವರ್ಷದ ಮೊದಲಾರ್ಧದಲ್ಲಿ (ಜನವರಿ-ಜೂನ್) ವ್ಯಾಪಾರವು ಶೇ 28ರಷ್ಟು ಪ್ರಗತಿ ಸಾಧಿಸಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT