ಇ–ಕಾಮರ್ಸ್ ಕ್ಷೇತ್ರದ ಪ್ರಮುಖ ಕಂಪನಿ ಅಮೆಜಾನ್ 9,000 ಉದ್ಯೋಗ ಕಡಿತಗೊಳಿಸುವುದಾಗಿ ಸೋಮವಾರ ಹೇಳಿದೆ. ಇದರೊಂದಿಗೆ ಆರ್ಥಿಕ ಹಿಂಜರಿತದ ಆತಂಕದ ನಡುವೆ, ಉದ್ಯೋಗ ಕಡಿತದ ಎರಡನೆಯ ಹಂತದ ಪ್ರಕ್ರಿಯೆ ಕೈಗೊಳ್ಳುತ್ತಿರುವ ಪ್ರಮುಖ ಕಂಪನಿಗಳ ಸಾಲಿಗೆ ಸೇರ್ಪಡೆಯಾಗಿದೆ.
ಮೈಕ್ರೊಸಾಫ್ಟ್ ಕಾರ್ಪ್, ಸೇಲ್ಸ್‌ಫೋರ್ಸ್ ಇಂಕ್, ಆಲ್ಫಾಬೆಟ್ ಮತ್ತು ಮೆಟಾ ಸೇರಿದಂತೆ ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪನಿಗಳು ಇತ್ತೀಚಿನ ದಿನಗಳಲ್ಲಿ ಸಾವಿರಾರು ಜನರನ್ನು ಉದ್ಯೋಗದಿಂದ ತೆಗೆದಿವೆ.
ಫೇಸ್‌ಬುಕ್‌ನ ಮಾತೃಸಂಸ್ಥೆಯಾದ ಮೆಟಾ ಎರಡನೇ ಸುತ್ತಿನ ಉದ್ಯೋಗ ಕಡಿತವನ್ನು ಇತ್ತೀಚಿಗೆ ಘೋಷಿಸಿತ್ತು. ಅದೇ ಹಾದಿಯಲ್ಲಿ ಅಮೆಜಾನ್ ಸಾಗಿದೆ.
ಸದ್ಯದ ಆರ್ಥಿಕ ಪರಿಸ್ಥಿತಿಯು ವೆಚ್ಚ ಹಾಗೂ ಉದ್ಯೋಗ ಕಡಿತ ಕ್ರಮ ಕೈಗೊಳ್ಳುವಂತೆ ಮಾಡಿದೆ ಎಂದು ಸಿಇಒ ಆ್ಯಂಡಿ ಜಸ್ಸಿ ಹೇಳಿದ್ದಾರೆ
‘ಕಂಪನಿಯು ಕೆಲವು ವರ್ಷಗಳಿಂದ ಗಣನೀಯ ಸಂಖ್ಯೆಯ ಸಿಬ್ಬಂದಿಗೆ ಉದ್ಯೋಗ ನೀಡಿದೆ. ಆದರೆ, ಆರ್ಥಿಕತೆಯಲ್ಲಿ ನಿರ್ಮಾಣವಾಗಿರುವ ಅನಿಶ್ಚಿತತೆಯು ಕಂಪನಿಯ ವೆಚ್ಚಕ್ಕೆ ಕಡಿವಾಣ, ಉದ್ಯೋಗ ಕಡಿತಕ್ಕೆ ಆದ್ಯತೆ ನೀಡುವಂತೆ ಮಾಡಿದೆ’ ಎಂದು ಅವರು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.