ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲೇ ಇದ್ದಾರೆ ನೂರು ಕುಬೇರರು

ದೇಶದ ಸಿರಿವಂತರ 2023ರ ಪಟ್ಟಿ ಬಿಡುಗಡೆ ಮಾಡಿದ ಹುರೂನ್‌ ಇಂಡಿಯಾ
Published 11 ಅಕ್ಟೋಬರ್ 2023, 0:30 IST
Last Updated 11 ಅಕ್ಟೋಬರ್ 2023, 0:30 IST
ಅಕ್ಷರ ಗಾತ್ರ

ಮುಂಬೈ: ‌ದೇಶದಲ್ಲಿಯೇ ಅಧಿಕ ಸಂಖ್ಯೆಯ ಸಿರಿವಂತರು ನೆಲೆಸಿರುವ ನಗರಗಳ ಪೈಕಿ ಬೆಂಗಳೂರು ಮೂರನೇ ಸ್ಥಾನದಲ್ಲಿ ಇದ್ದು, ಸಿರಿವಂತರ ಸಂಖ್ಯೆಯು 100ಕ್ಕೆ ಏರಿಕೆ ಆಗಿದೆ. ಕಳೆದ ವರ್ಷ ಬೆಂಗಳೂರಿನಲ್ಲಿ ಇದ್ದ ಸಿರಿವಂತರ ಸಂಖ್ಯೆಯು 89 ಇತ್ತು. 

₹1 ಸಾವಿರ ಕೋಟಿಗೂ ಅಧಿಕ ಸಂಪತ್ತು ಮೌಲ್ಯ ಹೊಂದಿರುವ ಸಿರಿವಂತರ ಪಟ್ಟಿಯನ್ನು ಹುರೂನ್‌ ಇಂಡಿಯಾ ಮತ್ತು 360 ಒನ್‌ ವೆಲ್ತ್‌ ಸಂಸ್ಥೆ ಜಂಟಿಯಾಗಿ ಮಂಗಳವಾರ ಬಿಡುಗಡೆ ಮಾಡಿವೆ.  ‘360 ಒನ್‌ ವೆಲ್ತ್‌ ಹುರೂನ್‌ ಇಂಡಿಯಾ ರಿಚ್ ಲಿಸ್ಟ್‌ 2023’ರಲ್ಲಿ ಇರುವ ಮಾಹಿತಿಯಂತೆ, ಅಧಿಕ ಸಿರಿವಂತರು ನೆಲೆಸಿರುವ ನಗರಗಳ ಪೈಕಿ ಮುಂಬೈ ಮೊದಲ ಸ್ಥಾನದಲ್ಲಿದ್ದು, ಇಲ್ಲಿ 328 ಸಿರಿವಂತರು ಇದ್ದಾರೆ. 199 ಸಿರಿವಂತರನ್ನು ಹೊಂದಿರುವ ದೆಹಲಿಯು ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.

ಡಿ–ಮಾರ್ಟ್‌ನ ರಾಧಾಕಿಷನ್‌ ದಮಾನಿ ಅವರ ಸಂಪತ್ತು ಮೌಲ್ಯದಲ್ಲಿ ಶೇ 18ರಷ್ಟು ಇಳಿಕೆ ಕಂಡಿದ್ದು ಸಂಪತ್ತಿನ ಒಟ್ಟು ಮೌಲ್ಯವು ₹1.43 ಲಕ್ಷ ಕೋಟಿ ಆಗಿದೆ. ಇದರಿಂದಾಗಿ ಅವರು 8ನೇ ಸ್ಥಾನಕ್ಕೆ ಇಳಿಕೆ ಕಂಡಿದ್ದಾರೆ.

ಸ್ವಂತ ಪರಿಶ್ರಮದಿಂದ ಸಿರಿವಂತರಾದ ಮಹಿಳೆಯರ ಪಟ್ಟಿಯಲ್ಲಿ ಜೋಹೊ ಕಂಪನಿಯ ರಾಧಾ ವೆಂಬು ಅವರು ನೈಕಾ ಕಂಪನಿಯ ಸಿಇಒ ಫಲ್ಗುಣಿ ನಾಯರ್ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಏರಿದ್ದಾರೆ. ಜೆಪ್ಟೊ ಕಂಪನಿಯ ಕೈವಲ್ಯ ವೊಹ್ರಾ ಅವರು ಪಟ್ಟಿಯಲ್ಲಿ ಸೇರಿರುವ ಕಿರಿಯ ವಯಸ್ಸಿನ ಸಿರಿವಂತೆ ಆಗಿದ್ದಾರೆ.

ಕಳೆದ ವರ್ಷ ಸಂಪತ್ತು ಮೌಲ್ಯ ದುಪ್ಪಟ್ಟು ಆಗಿದ್ದ ಸಿರಿವಂತರ ಸಂಖ್ಯೆಯು 24 ಇತ್ತು. ಈ ವರ್ಷ 51 ಸಿರಿವಂತರ ಸಂಪತ್ತು ದುಪ್ಪಟ್ಟಾಗಿದೆ ಎಂದು ಹುರೂನ್‌ ತಿಳಿಸಿದೆ.

ಅಂಕಿ–ಅಂಶ

ಬೆಂಗಳೂರಿನ ಸಿರಿವಂತರಲ್ಲಿ ಪ್ರಮುಖರು

ಸ್ಥಾನ;ಹೆಸರು;ಕಂಪನಿ;ಸಂಪತ್ತು ಮೌಲ್ಯ (ಕೋಟಿಗಳಲ್ಲಿ)

38;ಅರ್ಜುನ್‌ ಮೆಂಡಾ ಮತ್ತು ಕುಟುಂಬ;ಆರ್‌ಎಂಜೆಡ್‌;₹37,000

43;ನಿತಿನ್ ಕಾಮತ್‌ ಮತ್ತು ಕುಟುಂಬ;ಜೆರೋದಾ;₹35,300

51;ಎಸ್‌. ಗೋಪಾಕೃಷ್ಣನ್‌ ಮತ್ತು ಕುಟುಂಬ;ಇನ್ಫೊಸಿಸ್‌;₹31,000

58;ಅಜೀಮ್ ಪ್ರೇಮ್‌ಜಿ ಮತ್ತು ಕುಟುಂಬ;ವಿಪ್ರೊ;₹30,000

59;ಎನ್‌.ಆರ್. ನಾರಾಯಣ ಮೂರ್ತಿ ಮತ್ತು ಕುಟುಂಬ;ಇನ್ಫೊಸಿಸ್‌;₹29,700

68;ರಂಜನ್‌ ಪೈ;ಮಣಿಪಾಲ್‌ ಎಜುಕೇಷನ್‌ ಆ್ಯಂಡ್ ಮೆಡಿಕಲ್;₹27,000

81;ನಿಕಿಲ್‌ ಕಾಮತ್;ಜೆರೋದಾ;₹23,100

83;ಜಿತೇಂದ್ರ ವೀರ್ವಾಣಿ;ಎಂಬಸಿ ಆಫಿಸ್‌ ಪಾರ್ಕ್ಸ್‌;₹22,700

84;ರಾಜ್‌ ಬಾಗ್ಮನೆ;ಬಾಗ್ಮನೆ ಡೆವಲಪರ್ಸ್;₹22,600

95;ಕಿರಣ್‌ ಮಜುಂದಾರ್ ಶಾ;ಬಯೋಕಾನ್;₹21,400

***

ದೇಶದ ಪ್ರಮುಖ ಸಿರಿವಂತರ ವಿವರ

ಸ್ಥಾನ;ಹೆಸರು;ಕಂಪನಿ;ಒಟ್ಟು ಸಂಪತ್ತು (ಲಕ್ಷ ಕೋಟಿಗಳಲ್ಲಿ)

1;ಮುಕೇಶ್ ಅಂಬಾನಿ ಮತ್ತು ಕುಟುಂಬ;ರಿಲಯನ್ಸ್‌ ಇಂಡಸ್ಟ್ರೀಸ್‌;₹8.08

2;ಗೌತಮ್ ಅದಾನಿ ಮತ್ತು ಕುಟುಂಬ;ಅದಾನಿ;₹4.74

3;ಸೈರಸ್‌ ಪೂನಾವಾಲ ಮತ್ತು ಕುಟುಂಬ;ಸಿರಂ ಇನ್‌ಸ್ಟಿಟ್ಯೂಟ್;₹2.78

4;ಶಿವ ನಾಡಾರ್ ಮತ್ತು ಕುಟುಂಬ;ಎಚ್‌ಸಿಎಲ್‌ ಟೆಕ್ನಾಲಜೀಸ್‌;₹2.28

5;ಗೋಪಿಚಂದ್ ಹಿಂದುಜಾ ಮತ್ತು ಕುಟುಂಬ;ಹಿಂದುಜಾ;₹1.76

6;ದಿಲೀಪ್‌ ಸಾಂಘ್ವಿ;ಸನ್‌ ಫಾರ್ಮಾಸುಟಿಕಲ್;₹1.64

7;ಲಕ್ಷ್ಮಿಮಿತ್ತಲ್‌ ಮತ್ತು ಕುಟುಂಬ;ಆರ್ಸೆಲರ್‌ ಮಿತ್ತಲ್;₹1.62

8;ರಾಧಾಕಿಷನ್ ದಮಾನಿ ಮತ್ತು ಕುಟುಂಬ;ಅವೆನ್ಯು ಸೂಪರ್‌ಮಾರ್ಕೆಟ್ಸ್;₹1.43

9;ಕುಮಾರ ಮಂಗಲಂ ಬಿರ್ಲಾ ಮತ್ತು ಕುಟುಂಬ;ಆದಿತ್ಯ ಬಿರ್ಲಾ;₹1.25

10;ನೀರಜ್‌ ಬಜಾಜ್‌ ಮತ್ತು ಕುಟುಂಬ;ಬಜಾಜ್‌ ಆಟೊ;₹1.20

ಗೌತಮ್ ಅದಾನಿ
ಗೌತಮ್ ಅದಾನಿ

ಅಂಬಾನಿ ದೇಶದ ಸಿರಿವಂತ ವ್ಯಕ್ತಿ ಭಾರತದ 2023ರ ಸಿರಿವಂತರ ಪಟ್ಟಿಯಲ್ಲಿ ಉದ್ಯಮಿ ಮುಕೇಶ್‌ ಅಂಬಾನಿ ಅವರು ಗೌತಮ್ ಅದಾನಿ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಹುರೂನ್‌ ಇಂಡಿಯಾ ಸಂಸ್ಥೆಯು ತಿಳಿಸಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಕೇಶ್‌ ಅಂಬಾನಿ ಅವರರ ಸಂಪತ್ತು ಶೇ 2ರಷ್ಟು ಏರಿಕೆ ಕಂಡು ₹8.08 ಲಕ್ಷ ಕೋಟಿಗೆ ತಲುಪಿದೆ. ಆದರೆ ಅದಾನಿ ಅವರ ಸಂಪತ್ತು ಶೇ 57ರಷ್ಟು ಇಳಿಕೆ ಕಂಡು ₹4.74 ಲಕ್ಷ ಕೋಟಿಗೆ ಕುಸಿದಿದೆ. ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್‌ ಜನವರಿಯಲ್ಲಿ ಅದಾನಿ ಕಂಪನಿಗಳ ವಿರುದ್ಧ ಬಿಡುಗಡೆ ಮಾಡಿದ ವರದಿಯಿಂದಾಗಿ ಗೌತಮ್‌ ಅದಾನಿ ಅವರ ಸಂಪತ್ತಿನಲ್ಲಿ ಈ ಪ್ರಮಾಣದ ಕುಸಿತ ಕಂಡುಬಂದಿದೆ ಎಂದು ಹುರೂನ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅನಸ್‌ ರೆಹಮಾನ್ ಜುನೈದ್ ಹೇಳಿದ್ದಾರೆ.  ಅದಾನಿ ಸಮೂಹವು ಷೇರು ದರಗಳನ್ನು ಅಕ್ರಮವಾಗಿ ಏರಿಳಿತ ಮಾಡಿದೆ ಮತ್ತು ಮಾಹಿತಿಗಳನ್ನು ಮುಚ್ಚಿಟ್ಟಿದೆ ಎನ್ನುವ ಆರೋಪಗಳನ್ನು ಹಿಂಡನ್‌ಬರ್ಗ್‌ ಮಾಡಿದೆ. ಆದರೆ ಅದಾನಿ ಸಮೂಹವು ತನ್ನ ಮೇಲಿನ ಎಲ್ಲ ಆರೋಪಗಳನ್ನೂ ಅಲ್ಲಗಳೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT