ಐಫೋನ್‌ 10ಎಸ್‌ ಬಿಡುಗಡೆ

7

ಐಫೋನ್‌ 10ಎಸ್‌ ಬಿಡುಗಡೆ

Published:
Updated:
Deccan Herald

ಕ್ಯುಪರ್ಟಿನೊ (ಅಮೆರಿಕ): ಆ್ಯಪಲ್‌ ಕಂಪನಿಯು ಸುಧಾರಿತ ಆವೃತ್ತಿಯ ಐಫೋನ್‌ 10ಎಸ್‌, ಐಫೋನ್‌ 10ಎಕ್ಸ್‌ ಮ್ಯಾಕ್ಸ್‌ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.

ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೊದಲ್ಲಿರುವ ಆ್ಯಪಲ್‌ ಕಂಪನಿಯ ಪ್ರಧಾನ ಕಚೇರಿಯಲ್ಲಿ ಸಿಇಒ ಟಿಮ್‌ ಕುಕ್‌, ಸುಧಾರಿತ ತಂತ್ರಜ್ಞಾನವಿರುವ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ‘ಐಫೋನ್‌ 10ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದ್ದೇವೆ’ ಎಂದು ಹೇಳಿದರು.

ಭಾರತವನ್ನೂ ಒಳಗೊಂಡು 50 ದೇಶಗಳಲ್ಲಿ ಅಕ್ಟೋಬರ್‌ 19ರಿಂದ ಮುಂಗಡ ಬುಕಿಂಗ್‌ ಆರಂಭವಾಗಲಿದೆ. ಅಕ್ಟೋಬರ್‌ 26  ರಿಂದ ಖರೀದಿಗೆ ಲಭ್ಯವಾಗಲಿವೆ.

‘ಐಫೋನ್‌ 10ಎಸ್‌ ಮುಂದಿನ ಪೀಳಿಗೆಯ ತಂತ್ರಜ್ಞಾನ ಒಳಗೊಂಡಿದ್ದು, ಭವಿಷ್ಯದ ಸ್ಮಾರ್ಟ್‌ಫೋನ್‌ಗಳಿಗೆ ಮಾದರಿಯಾಗಲಿದೆ’ ಎಂದು ಹಿರಿಯ ಉಪಾಧ್ಯಕ್ಷ ಫಿಲಿಪ್‌ ಶಿಲ್ಲರ್‌ ಹೇಳಿದ್ದಾರೆ.

ಆ್ಯಪಲ್‌ ವಾಚ್‌: ನಾಲ್ಕನೇ ಪೀಳಿಗೆಯ ಆ್ಯಪಲ್‌ ವಾಚ್‌ ಸಹ ಬಿಡುಗಡೆ ಮಾಡಿದೆ. ಆರೋಗ್ಯ ಮೇಲ್ವಿಚಾರಣೆ ಸೌಲಭ್ಯಗಳೂ ಇವೆ.

Tags: 

ಬರಹ ಇಷ್ಟವಾಯಿತೆ?

  • 3

    Happy
  • 1

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !