ಬುಧವಾರ, ಡಿಸೆಂಬರ್ 2, 2020
16 °C

₹ 259 ಕೋಟಿ ಬಂಡವಾಳ ಸಂಗ್ರಹಿಸಿದ ಏಥರ್ ಎನರ್ಜಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಹೂಡಿಕೆದಾರರರಿಂದ ₹ 259 ಕೋಟಿ ಬಂಡವಾಳ ಸಂಗ್ರಹಿಸಿರುವುದಾಗಿ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ತಯಾರಿಸುವ ನವೋದ್ಯಮ ಏಥರ್ ಎನರ್ಜಿ ಶನಿವಾರ ತಿಳಿಸಿದೆ.

ಒಟ್ಟಾರೆ ಹೂಡಿಕೆಯಲ್ಲಿ ಫ್ಲಿಪ್‌ಕಾರ್ಟ್‌ ಸಹ ಸ್ಥಾಪಕ ಸಚಿನ್‌ ಬನ್ಸಲ್‌ ಅವರು ಅತಿ ಹೆಚ್ಚು ಅಂದರೆ ₹170 ಕೋಟಿ ಹೂಡಿಕೆ ಮಾಡಿದ್ದಾರೆ. ಹೀರೊ ಮೊಟೊಕಾರ್ಪ್‌ ಕಂಪನಿ ₹ 88 ಕೋಟಿ ಹೂಡಿಕೆ ಮಾಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಬನ್ಸಲ್‌ ಅವರು ಈ ನವೋದ್ಯಮದಲ್ಲಿ ಒಟ್ಟಾರೆಯಾಗಿ ₹ 392 ಕೋಟಿ ಹೂಡಿಕೆ ಮಾಡಿದ್ದಾರೆ. ವಹಿವಾಟು ವಿಸ್ತರಣೆ ಯೋಜನೆ ಹಾಗೂ ಏಥರ್‌ 450 ಎಕ್ಸ್‌ ಸ್ಕೂಟರ್ ವಿತರಣೆಗೆ ಈ ಬಂಡವಾಳ ಸಂಗ್ರಹವು ನೆರವಾಗಲಿದೆ ಎಂದು ಕಂಪನಿ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು