ಮುಂಬೈ: ದೇಶದಲ್ಲಿನ ಎಟಿಎಂಗಳ ಸಂಖ್ಯೆ 2017ರ ಡಿಸೆಂಬರ್‌ನಿಂದ 2018ರ ಸೆಪ್ಟೆಂಬರ್ ಅವಧಿಯಲ್ಲಿ 2.07 ಲಕ್ಷದಿಂದ 2.05ಲಕ್ಷಕ್ಕೆ ಇಳಿಕೆಯಾಗಿದೆ ಎಂದು ಆರ್‌ಬಿಐ ಮಾಹಿತಿ ನೀಡಿದೆ.
ಸರ್ಕಾರಿ ಸ್ವಾಮ್ಯದ ಕೆಲವು ಬ್ಯಾಂಕ್‌ಗಳು ಶಾಖೆಗಳನ್ನು ಮೇಲ್ದರ್ಜೆಗೇರಿಸುತ್ತಿವೆ. ಇದರ ಜತೆಗೆಪಾಯಿಂಟ್ ಆಫ್ ಸೇಲ್, ಯುಪಿಐನಂತಹ ಡಿಜಿಟಲ್ ಪಾವತಿ ವ್ಯವಸ್ಥೆಗಳ ಬಳಕೆ ಹೆಚ್ಚಾಗುತ್ತಿದೆ. ಹೀಗಾಗಿ ಎಟಿಎಂಗಳ ಸಂಖ್ಯೆ ತಗ್ಗಿಸಲಾಗುತ್ತಿದೆ ಎಂದು 2017–18ರ ಬ್ಯಾಂಕಿಂಗ್ ವಲಯದ ಪ್ರಗತಿಯ ವರದಿಯಲ್ಲಿ ಈ ಮಾಹಿತಿಗಳನ್ನು ನೀಡಿದೆ.
ಆದರೆ, ನಿರ್ವಹಣಾ ವೆಚ್ಚದಲ್ಲಿ ಭಾರಿ ಏರಿಕೆ, ಹೊಸ ನೋಟುಗಳಿಗೆ ಮಷಿನ್‌ಗಳನ್ನು ಹೊಂದಿಸಲು ತಗಲುತ್ತಿರುವ ಹೆಚ್ಚುವರಿ ಹೊರೆಯನ್ನು ಬ್ಯಾಂಕ್‌ಗಳು ಭರಿಸದೇ ಇರುವುದರಿಂದ ಎಟಿಎಂಗಳನ್ನು ಮುಚ್ಚಲಾಗುತ್ತಿದೆ ಎನ್ನುವುದುಎಟಿಎಂ ಉದ್ಯಮದ ಒಕ್ಕೂಟದ (ಸಿಎಟಿಎಂಐ) ಸಮರ್ಥನೆ.
ಬ್ಯಾಂಕ್ ಆವರಣದಲ್ಲಿ ಇರದ 1 ಲಕ್ಷ ಎಟಿಎಂಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ನಿರ್ವಹಿಸುವ 13 ಸಾವಿರ ಎಟಿಎಂಗಳಿಗೆ ಬೀಗ ಬೀಳಲಿದೆ ಎಂದು ಒಕ್ಕೂಟ ತಿಳಿಸಿದೆ.
2016–2017ರಲ್ಲಿ 2.08 ಲಕ್ಷ ಎಟಿಎಂಗಳಿದ್ದವು. 2017–2018ರಲ್ಲಿ 2.07 ಲಕ್ಷಕ್ಕೆ ಅಂದರೆ ಒಂದು ಸಾವಿರ ಎಟಿಎಂಗಳನ್ನು ಮುಚ್ಚಲಾಗಿದೆ.ಬ್ಯಾಂಕ್ ಆವರಣದಲ್ಲಿರುವ ಎಟಿಎಂಗಳ ಸಂಖ್ಯೆಯೂ 1.09 ಲಕ್ಷದಿಂದ 1.06 ಲಕ್ಷಕ್ಕೆ ತಗ್ಗಿದೆ. ಆದರೆ, ಬ್ಯಾಂಕ್ ಆವರಣದಲ್ಲಿ ಇರದ ಎಟಿಎಂಗಳ ಸಂಖ್ಯೆ 98,545 ರಿಂದ 1 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಆರ್‌ಬಿಐ ಅಂಕಿ–ಅಂಶ ನೀಡಿದೆ.
ಸರ್ಕಾರಿ ಸ್ವಾಮ್ಯದ ಎಟಿಂಗಳ ಸಂಖ್ಯೆ 1.48 ಲಕ್ಷದಿಂದ 1.45 ಲಕ್ಷಕ್ಕೆ ಇಳಿಕೆಯಾಗಿದೆ. ಖಾಸಗಿ ವಲಯದ ಬ್ಯಾಂಕ್‌ಗಳ ಎಟಿಎಂಗಳ ಸಂಖ್ಯೆ 58,833 ರಿಂದ 60,145ಕ್ಕೆ ಏರಿಕೆಯಾಗಿದೆ ಎಂದು ಆರ್‌ಬಿಐ ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.