ಗುರುವಾರ , ಆಗಸ್ಟ್ 11, 2022
28 °C

ಎಯು ಸ್ಮಾಲ್‌ ಫೈನಾನ್ಸ್ ಬ್ಯಾಂಕ್‌ನಿಂದ ಹೊಸ ಕ್ರೆಡಿಟ್ ಕಾರ್ಡ್ ಸೇವೆ ಶುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬೇಕಾದ ಸೌಲಭ್ಯವನ್ನು, ಬೇಕಾದ ಅವಧಿಗೆ’ ಪಡೆಯುವ ಕ್ರೆಡಿಟ್ ಕಾರ್ಡ್‌ಅನ್ನು ಎಯು ಸ್ಮಾಲ್‌ ಫೈನಾನ್ಸ್ ಬ್ಯಾಂಕ್ ಈಚೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

‘ಕ್ರೆಡಿಟ್ ಕಾರ್ಡ್ ನೀಡುವ ಕಂಪನಿಗಳು, ಬೇರೆ ಬೇರೆ ಅಗತ್ಯಗಳಿಗಾಗಿ ಬೇರೆ ಬೇರೆ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುತ್ತವೆ. ಆದರೆ, ಎಲ್ಲ ಅಗತ್ಯಗಳನ್ನು ಪೂರೈಸುವ ಒಂದೇ ಕಾರ್ಡ್‌ ಸಿಗುವುದು ಸುಲಭವಲ್ಲ. ಗ್ರಾಹಕರಿಗೆ ತಮ್ಮ ಜೀವನ ಶೈಲಿಯ ಅಗತ್ಯಗಳಿಗೆ ತಕ್ಕಂತೆ, ಎಲ್ಲ ಬಗೆಯ ಸೌಲಭ್ಯಗಳನ್ನು ಈ ಕಾರ್ಡ್ ನೀಡುತ್ತದೆ. ಗ್ರಾಹಕರು ತಮ್ಮ ಅಗತ್ಯದ ಸೌಲಭ್ಯಕ್ಕೆ ತಾವೇ ಚಾಲನೆ ನೀಡುವ, ತಾವೇ ಅದನ್ನು ಸ್ಥಗಿತಗೊಳಿಸುವ ಅವಕಾಶವನ್ನು ಈ ಕಾರ್ಡ್ ಒದಗಿಸುತ್ತದೆ’ ಎಂದು ಬ್ಯಾಂಕ್‌ ಹೇಳಿದೆ.

ತಮಗೆ ಅಗತ್ಯವಿರುವ ಸೌಲಭ್ಯಕ್ಕೆ ಚಾಲನೆ ನೀಡಲು ಗ್ರಾಹಕರು ಶುಲ್ಕ ಪಾವತಿಸಬೇಕು. ಈ ಕಾರ್ಡ್ ಹೊಂದಿರುವ ಗ್ರಾಹಕರು ಪ್ರತಿ ತ್ರೈಮಾಸಿಕದಲ್ಲಿ ಎರಡು ಬಾರಿ ಲಾಂಜ್‌ ಸೌಲಭ್ಯ ಪಡೆಯಬಹುದು, ಆನ್‌ಲೈನ್‌ ಹಾಗೂ ಪಿಒಎಸ್ ಮೂಲಕ ನಡೆಸಿದ ವಹಿವಾಟುಗಳಿಗೆ ಹೆಚ್ಚಿನ ರಿವಾರ್ಡ್ ಪಾಯಿಂಟ್ಸ್ ಪಡೆಯುವ ಸೌಲಭ್ಯವೂ ಇದೆ ಎಂದು ಪ್ರಕಟಣೆ ತಿಳಿಸಿದೆ.

ಕಳೆದ ವರ್ಷ ಕ್ರೆಡಿಟ್ ಕಾರ್ಡ್ ಸೇವೆ ಆರಂಭಿಸಿದ ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ಇದುವರೆಗೆ 2.3 ಲಕ್ಷಕ್ಕೂ ಹೆಚ್ಚಿನ ಕ್ರೆಡಿಟ್ ಕಾರ್ಡ್‌ಗಳನ್ನು ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.