ಬಜಾಜ್ ಅಲಯನ್ಸ್ ಜತೆವಿಜಯ ಬ್ಯಾಂಕ್ ಒಪ್ಪಂದ

7

ಬಜಾಜ್ ಅಲಯನ್ಸ್ ಜತೆವಿಜಯ ಬ್ಯಾಂಕ್ ಒಪ್ಪಂದ

Published:
Updated:
Deccan Herald

ಬೆಂಗಳೂರು: ಖಾಸಗಿ ವಿಮೆ ಕಂಪನಿ ಬಜಾಜ್ ಅಲಯನ್ಸ್ ಜನರಲ್ ಇನ್ಶುರೆನ್ಸ್, ತನ್ನ ವಿಮೆ ಪಾಲಿಸಿಗಳ ಮಾರಾಟಕ್ಕೆ ವಿಜಯ ಬ್ಯಾಂಕ್ ಜತೆ ಒಪ್ಪಂದ ಮಾಡಿಕೊಂಡಿದೆ.

ಸಂಸ್ಥೆಯ ವಿಮೆ ಪಾಲಿಸಿಗಳು ಇನ್ನು ಮುಂದೆ ವಿಜಯ ಬ್ಯಾಂಕಿನ ಶಾಖೆಗಳಲ್ಲಿಯೂ ಲಭ್ಯವಾಗಲಿವೆ. ದೇಶದಾದ್ಯಂತ ಇರುವ  ಬ್ಯಾಂಕಿನ 2,129 ಶಾಖೆಗಳಲ್ಲಿ ವಿಮೆ ಪಾಲಿಸಿಗಳ ವಿತರಣೆ ನಡೆಯಲಿದೆ.

ಬ್ಯಾಂಕ್‌ನ ಗ್ರಾಹಕರಿಗೆ ಆರೋಗ್ಯ, ವೈಯಕ್ತಿಕ ಅಪಘಾತ, ಗೃಹ, ಮೋಟರ್ ಮತ್ತು ಪ್ರಯಾಣ ವಿಮೆ ಉತ್ಪನ್ನಗಳು ದೊರೆಯಲಿವೆ. ವಾಣಿಜ್ಯ ಕ್ಷೇತ್ರಗಳಾದ ಆಸ್ತಿ, ಸಾಲ ಮತ್ತು ಎಂಜಿನಿಯರಿಂಗ್ ವಿಮೆ ಸೌಲಭ್ಯವನ್ನೂ ನೀಡಲಿದೆ. 

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !