ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್ ಆಸ್ತಿ–ಹೊರೆ ನಡುವೆ ಭಾರಿ ವ್ಯತ್ಯಾಸ: ಪ್ರಣಬ್‌ ಸೇನ್

Last Updated 24 ಆಗಸ್ಟ್ 2022, 19:05 IST
ಅಕ್ಷರ ಗಾತ್ರ

ಕೋಲ್ಕತ್ತ : ದೇಶದ ಬ್ಯಾಂಕಿಂಗ್ ವಲಯದಲ್ಲಿ ಆಸ್ತಿ ಮತ್ತು ಹೊರೆಯ ನಡುವೆ ಭಾರಿ ಪ್ರಮಾಣದ ವ್ಯತ್ಯಾಸವಿದ್ದು, ಇದು ಯಾವುದೇ ಸಂದರ್ಭದಲ್ಲಿ ‘ಆಸ್ಫೋಟದ’ ಹಂತವನ್ನು ತಲುಪಬಹುದು ಎಂದು ಅರ್ಥಶಾಸ್ತ್ರಜ್ಞ ಪ್ರಣಬ್ ಸೇನ್ ಎಚ್ಚರಿಸಿದ್ದಾರೆ.

ದೇಶದ ಬಹುತೇಕ ಬ್ಯಾಂಕ್‌ಗಳು ಸರ್ಕಾರಿ ಸ್ವಾಮ್ಯದ್ದಾಗಿರುವ ಕಾರಣ ಈ ‘ಆಸ್ಫೋಟ’ ಸಂಭವಿಸಿಲ್ಲ ಎಂದಿದ್ದಾರೆ. ದೇಶದ ಬ್ಯಾಂಕ್‌ಗಳು ಬ್ರಿಟಿಷ್ ಮಾದರಿಯನ್ನು ಪಾಲಿಸುತ್ತಿವೆ. ಈ ಮಾದರಿಯು ಬ್ಯಾಂಕ್‌ಗಳಿಗೆ ಬಂಡವಾಳ ಮಾರುಕಟ್ಟೆಯಿಂದ ಹಣ ಪಡೆಯಲು ಅವಕಾಶ ನೀಡುವುದಿಲ್ಲ. ಹೀಗಾಗಿ, ಬ್ಯಾಂಕ್‌ಗಳಿಗೆ ಠೇವ
ಣಿಯೇ ಹಣಕಾಸಿನ ಪ್ರಧಾನ ಮೂಲ.‌

‘ಇಂದು ಬ್ಯಾಂಕ್‌ಗಳು ನೀಡುವ ಸಾಲದ ಸರಾಸರಿ ಅವಧಿಯು 9 ವರ್ಷ. ಠೇವಣಿಗಳ ಸರಾಸರಿ ಅವಧಿಯು ಎರಡೂವರೆ ವರ್ಷ. ಅಂದರೆ, ಬ್ಯಾಂಕ್‌ನ ಆಸ್ತಿಯ ಅವಧಿಯ 9 ವರ್ಷ, ಹೊರೆಯ ಅವಧಿ ಎರಡೂವರೆ ವರ್ಷ. ಇದು ಸಮಸ್ಯೆ ಸೃಷ್ಟಿಸಬಹುದು’ ಎಂದು ಸಾಂಖ್ಯಿಕ ಆಯೋಗದ ಮಾಜಿ ಅಧ್ಯಕ್ಷ ಕೂಡ ಆಗಿರುವ ಸೇನ್ ಹೇಳಿದ್ದಾರೆ.

‘ಬ್ಯಾಂಕಿಂಗ್ ಕಾಯ್ದೆಗಳು ಬ್ಯಾಂಕ್‌ಗಳಿಗೆ ಬಂಡವಾಳ ಮಾರುಕಟ್ಟೆಯಿಂದ ಹಣ ಸಂಗ್ರಹಿಸಲು ಅವಕಾಶ ಕಲ್ಪಿಸುವಂತೆ ಇರಬೇಕು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT