ಮಂಗಳವಾರ, ಜೂನ್ 15, 2021
27 °C

80 ಎನ್‌ಪಿಎ ಖಾತೆಗಳು ‘ಬ್ಯಾಡ್‌ ಬ್ಯಾಂಕ್‌’ಗೆ?

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೊಡ್ಡ ಮೊತ್ತದ 80 ಎನ್‌ಪಿಎ ಖಾತೆಗಳನ್ನು ಬ್ಯಾಂಕ್‌ಗಳು ‘ರಾಷ್ಟ್ರೀಯ ಆಸ್ತಿ ಪುನರ್‌ರಚನಾ ಕಂಪನಿ’ಗೆ (ಎನ್‌ಎಆರ್‌ಸಿಎಲ್‌) ವರ್ಗಾವಣೆ ಮಾಡುವ ಸಾಧ್ಯತೆ ಇದೆ. ಈ ಕಂಪನಿಯು ಜೂನ್‌ ತಿಂಗಳಿಂದ ಕೆಲಸ ಆರಂಭಿಸುವ ನಿರೀಕ್ಷೆ ಇದೆ.

2021–22ನೇ ಸಾಲಿನ ಬಜೆಟ್‌ನಲ್ಲಿ ಎನ್‌ಎಆರ್‌ಸಿಎಲ್‌ (ಅಥವಾ ಬ್ಯಾಡ್‌ ಬ್ಯಾಂಕ್‌) ಆರಂಭಿಸುವ ಘೋಷಣೆ ಮಾಡಲಾಗಿದೆ. ಮಾಮೂಲಿ ಬ್ಯಾಂಕ್‌ಗಳ ಎನ್‌ಪಿಎ ಖಾತೆಗಳನ್ನು ತನ್ನ ಸುಪರ್ದಿಗೆ ತೆಗೆದುಕೊಂಡು, ಸಾಲ ವಸೂಲಿಗೆ ಸಂಬಂಧಿಸಿದ ಮುಂದಿನ ಕ್ರಮಗಳನ್ನು ಬ್ಯಾಡ್‌ ಬ್ಯಾಂಕ್‌ ಕೈಗೊಳ್ಳುತ್ತದೆ.

ಬ್ಯಾಡ್‌ ಬ್ಯಾಂಕ್‌ಗೆ ವಹಿಸಲು ಗುರುತಿಸಿರುವ ಎನ್‌ಪಿಎ ಖಾತೆಗಳು ತಲಾ ₹ 500 ಕೋಟಿಗಿಂತ ಹೆಚ್ಚಿನ ಸಾಲ ಬಾಕಿ ಇರಿಸಿಕೊಂಡಿವೆ ಎಂದು ಮೂಲಗಳು ತಿಳಿಸಿವೆ. ಬ್ಯಾಡ್‌ ಬ್ಯಾಂಕ್‌ ಆರಂಭವಾದ ನಂತರ, ಒಟ್ಟು ₹ 2 ಲಕ್ಷ ಕೋಟಿಗಿಂತ ಹೆಚ್ಚಿನ ಮೌಲ್ಯದ ಎನ್‌ಪಿಎ ಖಾತೆಗಳು ಬ್ಯಾಂಕ್‌ಗಳಿಂದ ಬ್ಯಾಡ್‌ ಬ್ಯಾಂಕ್‌ಗೆ ವರ್ಗಾವಣೆ ಆಗುವ ನಿರೀಕ್ಷೆ ಇದೆ. ವಂಚನೆ ಎಂದು ಘೋಷಣೆ ಆಗಿರುವ ಖಾತೆಗಳು ಬ್ಯಾಡ್‌ ಬ್ಯಾಂಕ್‌ಗೆ ವರ್ಗಾವಣೆ ಆಗುವುದಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು