ಗುರುವಾರ , ಸೆಪ್ಟೆಂಬರ್ 23, 2021
28 °C

ಬ್ಯಾಂಕ್‌ಗಳ ಎನ್‌ಪಿಎ ₹ 8.34 ಲಕ್ಷ ಕೋಟಿಗೆ ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬ್ಯಾಂಕ್‌ಗಳಲ್ಲಿನ ವಸೂಲಾಗದ ಸಾಲವು (ಎನ್‌ಪಿಎ) ಮಾರ್ಚ್‌ 31ಕ್ಕೆ ₹ 61,180 ಕೋಟಿಯಷ್ಟು ಇಳಿಕೆ ಆಗಿದ್ದು ₹ 8.34 ಲಕ್ಷ ಕೋಟಿಗೆ ತಲುಪಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕೃಷ್ಣರಾವ್ ಕರಾಡ್ ಸೋಮವಾರ ತಿಳಿಸಿದ್ದಾರೆ.

2020ರ ಮಾರ್ಚ್ ಅಂತ್ಯಕ್ಕೆ ಬ್ಯಾಂಕ್‌ಗಳ ಎನ್‌ಪಿಎ ₹ 8.96 ಲಕ್ಷ ಕೋಟಿ ಇತ್ತು. ಕೇಂದ್ರ ಸರ್ಕಾರವು ತೆಗೆದುಕೊಂಡಿರುವ ಹಲವು ಕ್ರಮಗಳಿಂದಾಗಿ ಎನ್‌ಪಿಎ ಇಳಿಕೆ ಆಗಿದೆ ಎಂದು ಅವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಆರು ಹಣಕಾಸು ವರ್ಷಗಳಲ್ಲಿ ₹ 5.01 ಲಕ್ಷ ಕೋಟಿ ಸಾಲವನ್ನು ವಸೂಲಿ ಮಾಡಿವೆ. ಆರ್‌ಬಿಐ ಮಾಹಿತಿಯ ಪ್ರಕಾರ, ಕೃಷಿ ಮತ್ತು ಪೂರಕ ಚಟುವಟಿಕೆ, ಎಂಎಸ್‌ಎಂಇ, ವಸತಿ ಮತ್ತು ವಾಹನ ಸಾಲ ನೀಡಿಕೆಯು ಕ್ರಮವಾಗಿ ಶೇಕಡ 12, ಶೇ 8.5 ಮತ್ತು ಶೇ 9.1ರಷ್ಟು ಬೆಳವಣಿಗೆ ಕಂಡಿದೆ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು