ಮಂಗಳವಾರ, ಏಪ್ರಿಲ್ 13, 2021
23 °C

ಮುದ್ರಾ ಯೋಜನೆ: 6 ವರ್ಷಗಳಲ್ಲಿ ₹ 15 ಲಕ್ಷ ಕೋಟಿ ಮಂಜೂರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಮುದ್ರಾ ಯೋಜನೆಯಡಿ ಆರು ವರ್ಷಗಳಲ್ಲಿ 28.68 ಕೋಟಿ ಫಲಾನುಭವಿಗಳಿಗೆ ₹ 14.96 ಲಕ್ಷ ಕೋಟಿ ಮಂಜೂರು ಮಾಡಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಬುಧವಾರ ಮಾಹಿತಿ ನೀಡಿದೆ.

ತಯಾರಿಕೆ, ವ್ಯಾಪಾರ ಮತ್ತು ಸೇವಾ ವಲಯಗಳು ಹಾಗೂ ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಆದಾಯ ಸೃಷ್ಟಿಸುವ ಉದ್ದೇಶಕ್ಕೆ ಸಾಲ ನೀಡಲಾಗುತ್ತಿದೆ.

ಸಣ್ಣ ಉದ್ದಿಮೆಗಳನ್ನು ಉತ್ತೇಜಿಸುವ ಸಲುವಾಗಿ 2015ರ ಏಪ್ರಿಲ್‌ 8ರಂದು ಮುದ್ರಾ ಯೋಜನೆಗೆ ಚಾಲನೆ ನೀಡಲಾಗಿದೆ. ಜಾಮೀನು ಅಗತ್ಯ ಇಲ್ಲದೇ ಗರಿಷ್ಠ ₹ 10 ಲಕ್ಷದವರೆಗೂ ಸಾಲ ನೀಡುವ ಯೋಜನೆ ಇದಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.