ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರು ವಿಕ್ರಯ ಪ್ರಕ್ರಿಯೆಗೆ ವೇಗ

ನಾಲ್ಕನೇ ತ್ರೈಮಾಸಿಕದಲ್ಲಿ ಭಾರತ್‌–22 ಇಟಿಎಫ್‌
Last Updated 3 ನವೆಂಬರ್ 2019, 17:30 IST
ಅಕ್ಷರ ಗಾತ್ರ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಷೇರು ವಿಕ್ರಯದ ಮೂಲಕ ₹ 1.05 ಲಕ್ಷ ಕೋಟಿ ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಷೇರು ವಿಕ್ರಯ ಪ್ರಕ್ರಿಯೆಗೆ ವೇಗ ನೀಡುತ್ತಿದೆ.

ಕೇಂದ್ರೋದ್ಯಮಗಳ ಭಾರತ್‌–22ಇಟಿಎಫ್‌ನ ಐದನೇ ಕಂತನ್ನು ನಾಲ್ಕನೇ ತ್ರೈಮಾಸಿಕದಲ್ಲಿ ಜಾರಿಗೊಳಿಸಲು ನಿರ್ಧರಿಸಿದೆ.

ಮೂರು ತ್ರೈಮಾಸಿಕಗಳಲ್ಲಿಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ಈ ನಿರ್ಧಾರಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಅಕ್ಟೋಬರ್‌ನಲ್ಲಿ ಬಿಡಗುಡೆ ಮಾಡಿದ್ದ ನಾಲ್ಕನೇ ಕಂತಿಗೆ ನೀಡಿಕೆ ಬೆಲೆಗಿಂತಲೂ 12 ಪಟ್ಟು ಹೆಚ್ಚು ಬಿಡ್‌ ಸಲ್ಲಿಕೆಯಾಗಿತ್ತು.

ಭಾರತ್‌–22ಇಟಿಎಫ್‌ನಲ್ಲಿ ಮುಖ್ಯವಾಗಿ ಒಎನ್‌ಜಿಸಿ, ಐಒಸಿ, ಎಸ್‌ಬಿಐ, ಬಿಪಿಸಿಎಲ್‌, ಕೋಲ್‌ ಇಂಡಿಯಾ ಮತ್ತು ನ್ಯಾಲ್ಕೊ ಕಂಪನಿಗಳಿವೆ.

8 ಕಂಪನಿ ಮಾರುಕಟ್ಟೆ ಮೌಲ್ಯದಲ್ಲಿ ಏರಿಕೆ
ನವದೆಹಲಿ: ಮುಂಬೈ ಷೇರುಪೇಟೆಯಲ್ಲಿ ಕಳೆದ ವಾರ ವಹಿವಾಟು ನಡೆಸಿದ ಪ್ರಮುಖ 10 ಕಂಪನಿಗಳಲ್ಲಿ 8 ಕಂಪನಿಗಳ ಮಾರುಕಟ್ಟೆ ಮೌಲ್ಯದಲ್ಲಿ ₹ 1.34 ಲಕ್ಷ ಕೋಟಿಗಳಷ್ಟು ಏರಿಕೆಯಾಗಿದೆ.

ಟಾಟಾ ಕನ್ಸಲ್ಟನ್ಸಿ ಸರ್ವೀಸ್‌ (ಟಿಸಿಎಸ್‌) ಮಾರುಕಟ್ಟೆ ಮೌಲ್ಯ ₹ 28,893 ಕೋಟಿಗಳಷ್ಟು ಗರಿಷ್ಠ ಏರಿಕೆ ಕಂಡು, ₹ 8.26 ಲಕ್ಷ ಕೋಟಿಗೆ ತಲುಪಿದೆ.

ರಿಲಯನ್ಸ್ ಮೊದಲ ಸ್ಥಾನ ಕಾಯ್ದುಕೊಂಡಿದ್ದು, ಮಾರುಕಟ್ಟೆ ಮೌಲ್ಯ ₹ 9.23 ಲಕ್ಷ ಕೋಟಿಗಳಷ್ಟಿದೆ. ಟಿಸಿಎಸ್‌ ಎರಡನೇ ಸ್ಥಾನದಲ್ಲಿದೆ.

ವಾರದ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 1,107 ಅಂಶಗಳಷ್ಟು(ಶೇ 2.83) ಏರಿಕೆ ಕಂಡುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT