ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರ್ತಿ ಇನ್ಫ್ರಾಟೆಲ್‌–ಇಂಡಸ್‌ ಟವರ್‌ವಿಲೀನ ಗಡುವು 2 ತಿಂಗಳು ವಿಸ್ತರಣೆ

Last Updated 24 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ನವದೆಹಲಿ : ಭಾರ್ತಿ ಇನ್ಫ್ರಾಟೆಲ್‌ ಮತ್ತು ಇಂಡಸ್‌ ಟವರ್‌ ವಿಲೀನದ ಗಡುವು ಏಪ್ರಿಲ್‌ 24ರವರೆಗೆ ವಿಸ್ತರಣೆಗೊಂಡಿದೆ.

ಭಾರ್ತಿ ಇನ್ಫ್ರಾಟೆಲ್‌ ಕಂಪನಿಯ ಆಡಳಿತ ಮಂಡಳಿ ಸೋಮವಾರ ಸಭೆ ಸೇರಿ, ಅವಧಿ ವಿಸ್ತರಿಸುವ ನಿರ್ಧಾರಕ್ಕೆ ಬಂದಿದೆ.

ದೂರಸಂಪ‍ರ್ಕ ವಲಯದ ಬಿಕ್ಕಟ್ಟು ಮತ್ತು ಅದರಿಂದಾಗಲಿರುವ ಪರಿಣಾಮವನ್ನು ಪರಿಗಣಿಸಿದ ಬಳಿಕ ವಿಲೀನ ಯೋಜನೆ ಜಾರಿಗೊಳಿಸುವ ಬಗ್ಗೆ ಆಡಳಿತ ಮಂಡಳಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಕಂಪನಿಯು ಷೇರುಪೇಟೆಗೆ ತಿಳಿಸಿದೆ.

ವಿಲೀನದ ಬಳಿಕ ಇಂಡಸ್‌ ಟವರ್ಸ್‌ ಲಿಮಿಟೆಡ್‌ ಎನ್ನುವ ಹೆಸರಿನಲ್ಲಿ ಕಾರ್ಯಾಚರಣೆ ಮುಂದುವರಿಸಲಿದ್ದು,
ಚೀನಾದಾಚೆಗೆ ವಿಶ್ವದಲ್ಲಿಯೇ ಅತಿದೊಡ್ಡ ಟವರ್‌ ಕಂಪನಿಯಾಗಿ ಹೊರಹೊಮ್ಮಲಿದೆ.ಹೊಸ ಕಂಪನಿಯು 22 ದೂರಸಂಪರ್ಕ ಸೇವಾ ‍ಪ್ರದೇಶಗಳಲ್ಲಿ ಕಾರ್ಯಚರಣೆ ನಡೆಸಲಿದ್ದು, ಒಟ್ಟು ಟವರ್‌ಗಳ ಸಂಖ್ಯೆ 1.63 ಲಕ್ಷಕ್ಕೆ ಏರಿಕೆಯಾಗಲಿದೆ.

ನಷ್ಟದಲ್ಲಿರುವ ವೊಡಾಫೋನ್‌ ಐಡಿಯಾ ಮತ್ತು ಭಾರ್ತಿ ಕಂಪನಿಗಳಿಗೆ ಈ ವಿಲೀನವು ಹೆಚ್ಚು ಪ್ರಯೋಜನಕಾರಿಯಾಗಿ ಪರಿಣಮಿಸಲಿದೆ. ಸಕಾಲಕ್ಕೆ ಒಪ್ಪಂದ ನಡೆದರೆ, ಭಾರ್ತಿ ಏರ್‌ಟೆಲ್‌ ಮತ್ತು ವೊಡಾಫೋನ್‌ ಐಡಿಯಾ ಕಂಪನಿಗಳು ಇಂಡಸ್‌ ಟವರ್ಸ್‌ನಲ್ಲಿ ಹೊಂದಿರುವ ಷೇರುಗಳನ್ನು ಮಾರಾಟ ಮಾಡುವ ಮೂಲಕ ಬಂಡವಾಳ ಸಂಗ್ರಹಿಸಲು ಅನುಕೂಲ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT