ಬಿಗ್‌ ಬಜಾರ್‌ : ಆ.11 ರಿಂದ 15ರವರೆಗೆ ‘ಮಹಾ ಉಳಿತಾಯ’ ಮಾರಾಟ

7

ಬಿಗ್‌ ಬಜಾರ್‌ : ಆ.11 ರಿಂದ 15ರವರೆಗೆ ‘ಮಹಾ ಉಳಿತಾಯ’ ಮಾರಾಟ

Published:
Updated:

ಬೆಂಗಳೂರು: ಫ್ಯೂಚರ್‌ ಗ್ರೂಪ್‌ನ ಸರಣಿ ರಿಟೇಲ್‌ ಮಳಿಗೆ ಬಿಗ್‌ ಬಜಾರ್‌ನ ಐದು ದಿನಗಳ ಮಹಾ ಉಳಿತಾಯ ಮಾರಾಟ ಉತ್ಸವ ಇದೇ 11 ರಿಂದ 15ರವರೆಗೆ ನಡೆಯಲಿದೆ.

ಈ ಬಾರಿಯ ಮಾರಾಟ ಉತ್ಸವ ದೊಡ್ಡ ಪ್ರಮಾಣದಲ್ಲಿ ಇರಲಿದೆ. ಇದೇ ಮೊದಲ ಬಾರಿಗೆ ಬ್ರ್ಯಾಂಡ್‌ ಫ್ಯಾಕ್ಟರಿ, ಸೆಂಟ್ರಲ್‌, ನಿಲಗಿರೀಸ್‌, ಹೆರಿಟೇಜ್‌ ಫ್ರೆಷ್‌ ಮತ್ತು ಫುಡ್‌ವರ್ಲ್ಡ್‌ ಮಳಿಗೆಗಳೂ ‘ಮಹಾ ಉಳಿತಾಯ’ ಮಾರಾಟದ ಭಾಗವಾಗಿರಲಿವೆ.

ಈ ಅವಧಿಯಲ್ಲಿ ₹ 3 ಸಾವಿರವರೆಗಿನ ಖರೀದಿಗೆ ಫ್ಯೂಚರ್‌ ಪೇ ವಾಲೆಟ್‌ ಮತ್ತು ಪೇಟಿಎಂ ಮೂಲಕ ಹಣ ಪಾವತಿಸಿದರೆ ಗ್ರಾಹಕರಿಗೆ ₹ 1,200ರವರೆಗೆ ನಗದು ಮರಳಿಸಲು ನಿರ್ಧರಿಸಲಾಗಿದೆ.

‘ಗ್ರಾಹಕರಿಗೆ ಕಿರಿಕಿರಿ ಮುಕ್ತ ಖರೀದಿ ಅನುಭವ ಒದಗಿಸಲು ಬಿಲ್ಲಿಂಗ್‌ ಸೌಲಭ್ಯ ಹೆಚ್ಚಿಸಲಾಗಿದೆ. ಎಲೆಕ್ಟ್ರಾನಿಕ್ಸ್‌,  ಗೃಹೋಪಯೋಗಿ ಸಲಕರಣೆ, ಆಹಾರ, ದವಸ ಧಾನ್ಯ, ಫ್ಯಾಷನ್‌ ವಸ್ತ್ರ, ಅಡುಗೆ ಮನೆ ಪರಿಕರ, ಗೃಹ ಅಲಂಕಾರ ಸರಕುಗಳು ‘ಮಹಾ ಉಳಿತಾಯ ಮಾರಾಟ’ದಲ್ಲಿ ಸೇರ್ಪಡೆಯಾಗಿರುತ್ತವೆ ಎಂದು ಸಂಸ್ಥೆಯ ಸಿಇಒ ಸದಾಶಿವ ನಾಯಕ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !