ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಷ್‌ ನಿವ್ವಳ ಲಾಭ ₹420 ಕೋಟಿ

Last Updated 7 ನವೆಂಬರ್ 2018, 19:46 IST
ಅಕ್ಷರ ಗಾತ್ರ

ಬೆಂಗಳೂರು: ವಾಹನ ಬಿಡಿಭಾಗ ತಯಾರಿಕೆ, ತಂತ್ರಜ್ಞಾನ ಮತ್ತು ಸೇವಾ ಪೂರೈಕೆ ಕ್ಷೇತ್ರದ ಬಾಷ್ ಲಿಮಿಟೆಡ್, ದ್ವಿತೀಯ ತ್ರೈಮಾಸಿಕದಲ್ಲಿ ₹ 420 ಕೋಟಿಗಳಷ್ಟು ನಿವ್ವಳ ಲಾಭ ಗಳಿಸಿದೆ.

ವರ್ಷದ ಹಿಂದಿನ ಇದೇ ಅವಧಿಯಲ್ಲಿ ₹ 353 ಕೋಟಿ ನಿವ್ವಳ ಲಾಭ ಗಳಿಸಿತ್ತು. ಈ ಬಾರಿಯ ಒಟ್ಟು ವರಮಾನವು ₹ 3,340 ಕೋಟಿಗಳಷ್ಟಾಗಿದೆ. ವರ್ಷದ ಹಿಂದೆ ಇದು ₹ 2,940 ಕೋಟಿಗಳಷ್ಟಿತ್ತು. ಅರ್ಧ ವಾರ್ಷಿಕ ವರಮಾನವು ₹ 6,413 ಕೋಟಿಗಳಷ್ಟಾಗಿದ್ದು, ಹಿಂದಿನ ವರ್ಷಕ್ಕಿಂತ ಶೇ 17.5ರಷ್ಟು ಏರಿಕೆ ಕಂಡಿದೆ.

ಹಲವಾರು ಕ್ಷೇತ್ರಗಳಲ್ಲಿ ಉದ್ಯಮಕ್ಕಿಂತ ಮುಂಚೂಣಿಯಲ್ಲಿ ಇರುವ ಸಂಸ್ಥೆಯು, ಪರಸ್ಪರ ಸಂವಹನದಿಂದ ಕಾರ್ಯನಿರ್ವಹಿಸುವ ಡಿಜಿಟಲ್‌ ಉಪಕರಣಗಳ (ಐಒಟಿ) ಸೇವಾ ಕ್ಷೇತ್ರದಲ್ಲೂ ಹೊಸತನ ಅಳವಡಿಸಿಕೊಳ್ಳುತ್ತಿದೆ.

‘ವಹಿವಾಟು ಮತ್ತು ತಯಾರಿಕೆಯಲ್ಲಿ ಗಮನಾರ್ಹ ಸುಧಾರಣೆ ಕಂಡು ಬಂದಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸೌಮಿತ್ರ ಭಟ್ಟಾಚಾರ್ಯ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT