ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ ಆಫ್‌ ಬರೋಡ ಲಾಭ ಶೇ 88ರಷ್ಟು ಹೆಚ್ಚಳ

Published 5 ಆಗಸ್ಟ್ 2023, 16:35 IST
Last Updated 5 ಆಗಸ್ಟ್ 2023, 16:35 IST
ಅಕ್ಷರ ಗಾತ್ರ

ಮುಂಬೈ: ಬ್ಯಾಂಕ್‌ ಆಫ್‌ ಬರೋಡ (ಬಿಒಬಿ) ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಶೇ 87.7ರಷ್ಟು ಹೆಚ್ಚಾಗಿದ್ದು, ₹4,070 ಕೋಟಿಗೆ ತಲುಪಿದೆ.

ಬಡ್ಡಿ ವರಮಾನ ಹೆಚ್ಚಾಗಿರುವುದು ಮತ್ತು ಸಾಲ ನೀಡಿಕೆಯಲ್ಲಿ ಉತ್ತಮ ಬೆಳವಣಿಗೆ ಕಂಡಿರುವುದೇ ಈ ಪ್ರಮಾಣದಲ್ಲಿ ಲಾಭ ಗಳಿಸಲು ಕಾರಣ ಎಂದು ಬ್ಯಾಂಕ್‌ ಹೇಳಿದೆ.

ಬ್ಯಾಂಕ್‌ನ ಆಸ್ತಿ ಗುಣಮಟ್ಟದಲ್ಲಿ ಸುಧಾರಣೆ ಕಂಡಿರುವುದರಿಂದ ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟ ಭರಿಸಲು ತೆಗೆದಿರಿಸುವ ಮೊತ್ತದಲ್ಲಿ ಇಳಿಕೆ ಆಗಿದೆ. ಇದು ಸಹ ಲಾಭ ಹೆಚ್ಚಾಗಲು ಕಾರಣವಾಗಿದೆ.

ಕಾರ್ಯಾಚರಣಾ ವರಮಾನ ಶೇ 42.9ರಷ್ಟು ಹೆಚ್ಚಾಗಿದ್ದು ₹14,319 ಕೋಟಿಗೆ  ತಲುಪಿದೆ. ನಿವ್ವಳ ಬಡ್ಡಿ ವರಮಾನ (ಎನ್‌ಐಐ) ಶೇ 24ರಷ್ಟು ಹೆಚ್ಚಾಗಿ ₹10,997 ಕೋಟಿಗೆ ತಲುಪಿದೆ. ಇತರೆ ವರಮಾನವು ಶೇ 2.8ರಷ್ಟು ಹೆಚ್ಚಾಗಿ ₹1,152 ಕೊಟಿ ಆಗಿದೆ.

ವಸೂಲಾಗದ ಸಾಲದ ಸರಾಸರಿ ಪ್ರಮಾಣವು (ಜಿಎನ್‌ಪಿಎ) ಶೇ 6.26 ರಿಂದ ಶೇ 3.51ಕ್ಕೆ ಇಳಿಕೆ ಕಂಡಿದೆ. ನಿವ್ವಳ ಎನ್‌ಪಿಎ ಶೇ 1.58ರಿಂದ ಶೇ 0.78ಕ್ಕೆ ತಗ್ಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT