ಸೋಮವಾರ, ಜುಲೈ 4, 2022
23 °C

ಗ್ರಾಹಕರನ್ನು ಉಳಿಸಿಕೊಳ್ಳುವ ವಿಶ್ವಾಸದಲ್ಲಿ ಬಿಎಸ್‌ಎನ್‌ಎಲ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಬಿಎಸ್‌ಎನ್‌ಎಲ್ ಕಂಪನಿಯು ಪ್ತಸಕ್ತ ಹಣಕಾಸು ವರ್ಷದಲ್ಲಿ ಸೇವೆಗಳಿಂದ ₹ 17 ಸಾವಿರ ಕೋಟಿ ಆದಾಯ ನಿರೀಕ್ಷಿಸಿದೆ. ಇದು ಹಿಂದಿನ ಹಣಕಾಸು ವರ್ಷದ ಆದಾಯಕ್ಕಿಂತ ಕಡಿಮೆ.

ಮುಂದಿನ ದಿನಗಳಲ್ಲಿ ಕಂಪನಿಯು ಗುಣಮಟ್ಟದ 4ಜಿ ಸೇವೆಗಳನ್ನು ಆರಂಭಿಸಲಿದ್ದು, ಆ ಮೂಲಕ ಗ್ರಾಹಕರನ್ನು ಉಳಿಸಿಕೊಳ್ಳಲಿದೆ ಎಂಬ ವಿಶ್ವಾಸವನ್ನು ಕಂಪನಿಯ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಪಿ.ಕೆ. ಪುರವಾರ್ ವ್ಯಕ್ತಪಡಿಸಿದ್ದಾರೆ.

ಖಾಸಗಿ ದೂರಸಂಪರ್ಕ ಸೇವಾ ಕಂಪನಿಗಳು 5ಜಿ ಸೇವೆಗಳನ್ನು ಆರಂಭಿಸಿದರೂ, ಬಿಎಸ್‌ಎನ್‌ಎಲ್‌ಗೆ ತಕ್ಷಣ ಹಾನಿಯಾಗದು. 5ಜಿ ಸೇವೆ ಪಡೆಯಲು ಅಗತ್ಯವಿರುವ ಸಾಧನಗಳು ಈಗಷ್ಟೇ ಮಾರುಕಟ್ಟೆಗೆ ಬರುತ್ತಿವೆ ಎಂದು ಪುರವಾರ್ ಹೇಳಿದ್ದಾರೆ.

ಹಿಂದಿನ ವರ್ಷದಲ್ಲಿ ಬಿಎಸ್‌ಎನ್‌ಎಲ್‌ ₹ 7,411 ಕೋಟಿ ನಷ್ಟ ಕಂಡಿತ್ತು. ಈ ವರ್ಷವೂ ನಷ್ಟದ ಪ್ರಮಾಣ ಅಷ್ಟೇ ಇರುವ ನಿರೀಕ್ಷೆಯನ್ನು ಕಂಪನಿ ಹೊಂದಿದೆ.

ಕೇಂದ್ರ ಸರ್ಕಾರವು ಭಾರತ್ ಬ್ರಾಡ್‌ಬ್ಯಾಂಡ್ ನಿಗಮ್‌ ಲಿಮಿಟೆಡ್ ಕಂಪನಿಯನ್ನು ಬಿಎಸ್‌ಎನ್‌ಎಲ್ ಜೊತೆ ವಿಲೀನ ಮಾಡುವ ಚಿಂತನೆ ಹೊಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು