ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀರ್ಘಾವಧಿ ಹೂಡಿಕೆಯೇ ಮಂತ್ರ

ಪೇಟೆಯಲ್ಲಿ ಹಣ ಹೂಡಿಕೆ: ‘ಬಿಟಿವಿಐ’ನ ‘ಮನಿ ಮಂತ್ರ’ ಕಾರ್ಯಕ್ರಮ
Last Updated 15 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಮೊದಲ ಬಾರಿಗೆ ಷೇರುಪೇಟೆಯಲ್ಲಿ ಹಣ ಹೂಡಿಕೆ ಮಾಡುತ್ತಿರುವವರುಎಲ್ಲಿ, ಹೇಗೆ, ಎಷ್ಟು ಅವಧಿಗಳವರೆಗೆ ಹೂಡಿಕೆ ಮಾಡುತ್ತಿದ್ದೇವೆ ಎನ್ನುವುದನ್ನು ನಿರ್ಧರಿಸಬೇಕು. ಎಂಬುದು ಬಿಸಿನೆಸ್‌ ಟೆಲಿವಿಷನ್‌ ಇಂಡಿಯಾ (ಬಿಟಿವಿಐ), ಶುಕ್ರವಾರ ಸಂಜೆ ಇಲ್ಲಿ ಆಯೋಜಿಸಿದ್ದ ಹಣ ಹೂಡಿಕೆ ಬಗ್ಗೆ ತಿಳಿವಳಿಕೆ ಮೂಡಿಸುವ ‘ಮನಿ ಮಂತ್ರ’ದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪರಿಣತರ ಒಟ್ಟಾಭಿಪ್ರಾಯವಾಗಿತ್ತು.

ದೇಶಿ–ಜಾಗತಿಕ ವಿದ್ಯಮಾನಗಳು, ಗಳಿಕೆ ಮತ್ತು ನಿರೀಕ್ಷೆಗಳು ಪೇಟೆಯ ವಹಿವಾಟಿನ ಮೇಲೆ ಪ್ರಭಾವ ಬೀರುತ್ತಿರುತ್ತವೆ. ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಿ ವಹಿವಾಟು ನಡೆಸಬಾರದು ಎನ್ನುವ ಅಭಿಪ್ರಾಯ ಕೇಳಿಬಂದಿತು.

‘ದೀರ್ಘಾವಧಿಯ ಹೂಡಿಕೆಯ ಗುರಿ ಇಟ್ಟುಕೊಳ್ಳುವುದರಿಂದ ಷೇರುಪೇಟೆಯಲ್ಲಿ ಉತ್ತಮ ಗಳಿಕೆ ಸಾಧ್ಯವಾಗಲಿದೆ. ಅಲ್ಪಾವಧಿಯಲ್ಲಿ ಏರಿಳಿತಗಳಿರುತ್ತವೆ. ಕನಿಷ್ಠ 5 ವರ್ಷಗಳವರೆಗೆ ಹೂಡಿಕೆಯ ಗುರಿ ಇಟ್ಟುಕೊಳ್ಳಬೇಕು. ಎರಡರಿಂದ ಮೂರು ವರ್ಷಗಳವರೆಗಿನ ಹೂಡಿಕೆಯಿಂದ ಲಾಭದ ಗಳಿಕೆ ನಿರೀಕ್ಷೆ ಮಾಡುವುದು ಸಮಂಜಸವಲ್ಲ’ ಎಂದುಆಪ್ಟಿಮಾ ಮನಿ ಮ್ಯಾನೇಜರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ ಮಥ್ಪಾಲ್‌ ಹೇಳಿದರು.

‘ದೊಡ್ಡ, ಮಧ್ಯಮ ಮತ್ತು ಸಣ್ಣ ಗಾತ್ರದ ಮ್ಯೂಚುವಲ್‌ ಫಂಡ್‌ ಷೇರುಗಳಲ್ಲಿ ಹೂಡಿಕೆ ಮಾಡಬಹುದು.ಆದರೆ, ಹೊಸ ಹೂಡಿಕೆದಾರರು ಸಣ್ಣ ಗಾತ್ರದ ಷೇರುಗಳಲ್ಲಿ ಹಣ ತೊಡಗಿಸದೇ ಇರುವುದು ಒಳ್ಳೆಯದು.‌ ಸಣ್ಣ ಗಾತ್ರದ ಷೇರುಗಳ ಕಂಪನಿಗಳ ಸಂಖ್ಯೆ ಕಡಿಮೆ ಇದ್ದು, ಹೆಚ್ಚು ಚಂಚಲವಾಗಿರುತ್ತವೆ’ ಎಂದರು.

‘ಯಾವುದೇ ಕಾರಣಕ್ಕೂ ಹೂಡಿಕೆ ಮಾಡಲೆಂದು ಸಾಲ ಮಾಡಬೇಡಿ.ನಿಮ್ಮ ಬಳಿ ಇರುವ ಹೆಚ್ಚುವರಿ ನಗದನ್ನಷ್ಟೇ ಹೂಡಿಕೆ ಮಾಡಿ’ ಎಂದು ಚರ್ಚಾಗೋಷ್ಠಿ ನಿರ್ವಹಣೆ ಮಾಡಿದಬಿಟಿವಿಐ ಚಾನೆಲ್‌ನ ನಿರ್ದೇಶಕ ಮುರಳೀಧರ್‌ ಸ್ವಾಮಿನಾಥನ್‌ ಸಲಹೆ ನೀಡಿದರು.

ಮೂರು ಪ್ರಮುಖ ಅಂಶಗಳು: ‘ದೇಶದಲ್ಲಿ ಮೂರು ಪ್ರಮುಖ ಸಂಗತಿಗಳಾದ ವಿದ್ಯಮಾನಗಳು, ಗಳಿಕೆ ಮತ್ತುನಿರೀಕ್ಷೆಗಳು ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತವೆ. ಸದ್ಯದ ಮಟ್ಟಿಗೆ, ದೇಶಿ ವಿದ್ಯಮಾನಗಳಾದ ಮಧ್ಯಂತರ ಬಜೆಟ್‌ ಮತ್ತು ಆರ್‌ಬಿಐನ ಹಣಕಾಸು ನೀತಿ ಪರಾಮರ್ಶೆಗಳು ದೇಶದ ಆರ್ಥಿಕತೆಯ ದೀರ್ಘಾವಧಿ ಪ್ರಗತಿಗೆ ಪೂರಕವಾಗಿವೆ’ ಎಂದು ಮುರಳೀಧರ್‌ ಹೇಳಿದರು.

ನಿರೀಕ್ಷೆಗಳ ನಿಯಂತ್ರಣ ಮುಖ್ಯ: ‘ಸಾರ್ವತ್ರಿಕ ಚುನಾವಣೆಯು ಚಂಚಲ ಮತ್ತು ಅನಿಶ್ಚಿತ ವಾತಾವರಣ ನಿರ್ಮಾಣ ಮಾಡಬಹುದು. ಈಗಾಗಲೇ ಹೂಡಿಕೆ ಮಾಡಿದ್ದರೆ, ಇಂತಹ ಸ್ಥಿತಿಗಳು ಖರೀದಿಗೆ ಹೆಚ್ಚಿನ ಅವಕಾಶ ನೀಡಲಿವೆ. ವಿದ್ಯಮಾನಗಳು ಮತ್ತು ಗಳಿಕೆಗಿಂತಲೂ ನಿರೀಕ್ಷೆ ಅತಿ ಮುಖ್ಯ. ಹೂಡಿಕೆ ಮಾಡುವವರು ತಮ್ಮ ನಿರೀಕ್ಷೆಗಳನ್ನು ಹೇಗೆ ನಿಯಂತ್ರಿಸಬೇಕು ಎನ್ನುವುದನ್ನು ತಿಳಿದಿರಬೇಕು. ಇದನ್ನು ತಿಳಿದುಕೊಂಡರೆ ವಿದ್ಯಮಾನಗಳು ಮತ್ತು ಗಳಿಕೆಯನ್ನು ನಿರ್ವಹಣೆ ಮಾಡುವುದು ಸುಲಭ’ ಎಂದರು.

‘ಪೇಟೆಯ ಚಂಚಲತೆಗೆ ಆತಂಕ ಬೇಡ’
‘ನಮ್ಮ ಉಳಿತಾಯವನ್ನು ಸೂಕ್ತ ಮಾರ್ಗದಲ್ಲಿ ಹೂಡಿಕೆ ಮಾಡಿ ಲಾಭಗಳಿಸಿಕೊಳ್ಳಲು ಇದು ಸರಿಯಾದ ಸಮಯ.ಷೇರುಪೇಟೆ ಅಲ್ಪಾವಧಿಗೆ ಚಂಚಲವಾಗಿದ್ದರೂ ದೀರ್ಘಾವಧಿಗೆ ಉತ್ತಮ ಸಂಪತ್ತು ಸೃಷ್ಟಿಸುವ ಸಾಮರ್ಥ್ಯ ಹೊಂದಿರುತ್ತದೆ. ಷೇರುಪೇಟೆ ಇಳಿಮುಖವಾಗಿದ್ದರೆ ಭಯ ಪಡುವ ಅಗತ್ಯ ಇಲ್ಲ. ಏಕೆಂದರೆ, ಆ ಸಮಯದಲ್ಲಿ ಹೂಡಿಕೆಗೆ ಉತ್ತಮ ಅವಕಾಶ ಸಿಗುತ್ತದೆ' ಎಂದುಐಐಎಫ್‌ಎಲ್‌ನ ಮಾರುಕಟ್ಟೆ ಮತ್ತು ಕಾರ್ಪೊರೇಟ್‌ ವ್ಯವಹಾರಗಳ ಸಂಜೀವ್‌ ಭಾಸಿನ್‌ ತಿಳಿಸಿದರು.

‘ಷೇರಿನ ಬೆಲೆ ಉತ್ತಮವಾಗಿದ್ದರೆ, ಯಾವುದೇ ವಿದ್ಯಮಾನ, ಯಾರದೇ ಮಾತಿಗೆ ಕಿವಿಗೊಡಬೇಡಿ.ಮುಂದಿನ 10 ತಿಂಗಳಿನಲ್ಲಿ ಮಧ್ಯಮ ಗಾತ್ರದ ಷೇರುಗಳು ಉತ್ತಮ ಪ್ರದರ್ಶನ ತೋರುವ ನಿರೀಕ್ಷೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT