ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನರಾ ಬ್ಯಾಂಕ್‌ನಿಂದ ಹೊಸ ಠೇವಣಿ ಯೋಜನೆ

Last Updated 18 ಜನವರಿ 2023, 16:45 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌ 400 ದಿನಗಳ ಹೊಸ ಅವಧಿ ಠೇವಣಿ ಯೋಜನೆಗಳನ್ನು ಆರಂಭಿಸಿದೆ. ಅವಧಿಗೆ ಮೊದಲು ಠೇವಣಿ ಹಿಂಪಡೆಯುವುದು ಅಥವಾ ಠೇವಣಿಯ ಒಂದಿಷ್ಟು ‍ಪಾಲನ್ನು ಹಿಂದಕ್ಕೆ ಪಡೆಯುವ ಅವಕಾಶ ಇರುವ ಯೋಜನೆಯಲ್ಲಿ ₹ 25 ಸಾವಿರದಿಂದ ₹ 2 ಕೋಟಿವರೆಗೆ ತೊಡಗಿಸಬಹುದು. ಇದಕ್ಕೆ ಶೇಕಡ 7.15ರಷ್ಟು ಬಡ್ಡಿ ಸಿಗಲಿದೆ.

ಅವಧಿಗೆ ಮೊದಲು ಠೇವಣಿ ಹಣ ಹಿಂಪಡೆಯಲು ಅಥವಾ ಒಂದಿಷ್ಟು ಪಾಲನ್ನು ಮಾತ್ರ ಹಿಂದಕ್ಕೆ ಪಡೆಯಲು ಅವಕಾಶ ಇಲ್ಲದ ಯೋಜನೆಯಲ್ಲಿ ₹ 15 ಲಕ್ಷದಿಂದ ₹ 2 ಕೋಟಿವರೆಗೆ ಹಣ ತೊಡಗಿಸಬಹುದು. ಇದಕ್ಕೆ ಶೇ 7.25ರಷ್ಟು ಬಡ್ಡಿ ಸಿಗುತ್ತದೆ ಎಂದು ಕೆನರಾ ಬ್ಯಾಂಕ್‌ ಪ್ರಕಟಣೆ ತಿಳಿಸಿದೆ. ಎರಡೂ ಯೋಜನೆಗಳಲ್ಲಿ ಹಿರಿಯ ನಾಗರಿಕರಿಗೆ ಹೆಚ್ಚುವರಿಯಾಗಿ ಶೇ 0.50ರಷ್ಟು ಬಡ್ಡಿ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT