ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ವೃದ್ಧಿ ತೆರಿಗೆ: ಬದಲಾವಣೆ ಸಾಧ್ಯತೆ

Last Updated 25 ನವೆಂಬರ್ 2022, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೀರ್ಘಾವಧಿ ಬಂಡವಾಳ ವೃದ್ಧಿ ತೆರಿಗೆಯಲ್ಲಿ (ಎಲ್‌ಟಿಸಿಜಿ) ಕೆಲವು ಬದಲಾವಣೆಗಳನ್ನು ತರಲು ಕೇಂದ್ರ ಹಣಕಾಸು ಸಚಿವಾಲಯ ಪರಿಶೀಲನೆ ನಡೆಸಿದೆ.

ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಡಿಮ್ಯಾಟ್‌ ಖಾತೆಯಲ್ಲಿ ಇರಿಸಿಕೊಂಡ ಷೇರುಗಳ ಮಾರಾಟ ಮಾಡಿದ ನಂತರ ಬರುವ ಲಾಭಕ್ಕೆ ಈಗ ಎಲ್‌ಟಿಸಿಜಿ ತೆರಿಗೆ ಅನ್ವಯವಾಗುತ್ತಿದೆ. ಸ್ಥಿರಾಸ್ತಿಯನ್ನು ಸಂಪಾದಿಸಿದ ಎರಡು ವರ್ಷಗಳ ನಂತರ ಮಾರಾಟ ಮಾಡಿದಾಗ ಸಿಗುವ ಲಾಭಕ್ಕೆ, ಆಭರಣಗಳನ್ನು ಮೂರು ವರ್ಷಗಳ ನಂತರ ಮಾರಾಟ ಮಾಡಿದಾಗ ಬರುವ ಲಾಭಕ್ಕೆ ಎಲ್‌ಟಿಸಿಜಿ ತೆರಿಗೆ ಅನ್ವಯವಾಗುತ್ತದೆ.

‘ಬಂಡವಾಳ ವೃದ್ಧಿ ತೆರಿಗೆಯನ್ನು ಸರಳೀಕರಿಸುವ ಹಾಗೂ ಅದನ್ನು ತೆರಿಗೆದಾರ ಸ್ನೇಹಿ ಆಗಿಸುವ ಉದ್ದೇಶ ಇದೆ. ಬೇರೆ ಬೇರೆ ಆಸ್ತಿಗಳ ವಿಚಾರವಾಗಿ ಇರುವ ಭಿನ್ನ ತೆರಿಗೆ ಪ್ರಮಾಣಗಳಲ್ಲಿ ಸಮಾನತೆ ತರುವ ಉದ್ದೇಶವೂ ಇದೆ’ ಎಂದು ಮೂಲಗಳು ಹೇಳಿವೆ. ಫೆಬ್ರುವರಿಯಲ್ಲಿ ಮಂಡನೆಯಾಗುವ ಕೇಂದ್ರ ಬಜೆಟ್‌ನಲ್ಲಿ ಈ ಕುರಿತು ಘೋಷಣೆ ಮಾಡುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT