ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗದುರಹಿತ ವಹಿವಾಟಿಗೆ ಹಿನ್ನಡೆ

ಆರ್‌ಬಿಐ ಬಿಡುಗಡೆ ಮಾಡಿರುವ ಅಂಕಿ ಅಂಶ
Last Updated 25 ನವೆಂಬರ್ 2018, 20:06 IST
ಅಕ್ಷರ ಗಾತ್ರ

ನವದೆಹಲಿ: ದೇಶಿ ಅರ್ಥ ವ್ಯವಸ್ಥೆಯು ನಗದುರಹಿತ ಆರ್ಥಿಕತೆಯತ್ತ ಸಾಗುವ ಕನಸು ನಿರೀಕ್ಷಿಸಿದ ವೇಗದಲ್ಲಿ ನನಸಾಗುತ್ತಿಲ್ಲ.

ಡಿಜಿಟಲ್‌ ವಹಿವಾಟಿನ ವಿವಿಧ ವಿಧಾನಗಳ ಬಳಕೆಯು ಏರಿಕೆಯ ಹಾದಿಯಲ್ಲಿ ಇರುವುದರ ಬದಲಿಗೆ, ಕಡಿಮೆಯಾಗುತ್ತಿದೆ. ದೇಶದಲ್ಲಿ ನಗದುರಹಿತ (ಡಿಜಿಟಲ್‌) ವಹಿವಾಟು ಹೆಚ್ಚಿಸುವುದೂ, ಎರಡು ವರ್ಷಗಳ ಹಿಂದೆ ಹಠಾತ್ತಾಗಿ ಜಾರಿಗೆ ತರಲಾಗಿದ್ದ ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ನಿರ್ಧಾರದ ಮುಖ್ಯ ಆಶಯಗಳಲ್ಲಿ ಒಂದಾಗಿತ್ತು. ಆದರೆ, ಭಾರತೀಯ ರಿಸರ್ವ್‌ ಬ್ಯಾಂಕ್‌ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಬೇರೆಯೇ ಆದ ಕಥೆ ಹೇಳುತ್ತಿವೆ.

ಕ್ರೆಡಿಟ್‌ ಹಾಗೂ ಡೆಬಿಟ್‌ ಕಾರ್ಡ್‌, ಯುಪಿಐ, ಮೊಬೈಲ್‌ ವಾಲೆಟ್‌ ಮತ್ತು ಇಂಟರ್‌ನೆಟ್‌ ಬ್ಯಾಂಕಿಂಗ್‌ ಮೂಲಕ ನಡೆಯುವ ನಗದುರಹಿತ ವಹಿವಾಟು ಕಡಿಮೆಯಾಗುತ್ತಿದೆ. ಈ ವಿವರಗಳು ದೇಶದಾದ್ಯಂತ ನಡೆದ ಚಿಲ್ಲರೆ ವಹಿವಾಟನ್ನು ಆಧರಿಸಿವೆ. ಎಲ್ಲ ಬಗೆಯ ನಗದುರಹಿತ ವಹಿವಾಟಿನ ಸಂಖ್ಯೆ ಮತ್ತು ಮೊತ್ತವು ಕುಸಿಯುತ್ತಿರುವುದನ್ನು ಈ ಅಂಕಿ ಅಂಶಗಳು ದೃಢಪಡಿಸುತ್ತವೆ.

ಈ ವರ್ಷಾರಂಭದಲ್ಲಿ ಮೊಬೈಲ್‌ ವಾಲೆಟ್‌ ವಹಿವಾಟು ಹೆಚ್ಚಳಗೊಂಡಿತ್ತು. ನಂತರದ ದಿನಗಳಲ್ಲಿ ಇಂತಹ ವಹಿವಾಟು ಕೂಡ ಕಡಿಮೆಯಾಗುತ್ತಿದೆ. ರಿಟೇಲ್‌ ಮಳಿಗೆಗಳಲ್ಲಿನ ಪಾಯಿಂಟ್‌ ಆಫ್‌ ಸೇಲ್‌ (ಪಿಒಎಸ್‌) ಸಾಧನಗಳ ಮೂಲಕ ನಡೆಯುವ ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ಗಳ ಬಳಕೆಯೂ ತಿಂಗಳಿನಿಂದ ತಿಂಗಳಿಗೆ ಕಡಿಮೆಯಾಗುತ್ತಿದೆ.

ಅಂಕಿ ಅಂಶಗಳಲ್ಲಿ ‘ಯುಪಿಐ’ ವಹಿವಾಟಿನ ಬಗ್ಗೆ ಯಾವುದೇ ಉಲ್ಲೇಖ ಇಲ್ಲ. ಈ ಹಿಂದಿನ ಅಂಕಿಅಂಶಗಳ ಪ್ರಕಾರ, ‘ಭೀಮ್‌’ (BHIM) ಆ್ಯಪ್‌ ಬಿಡುಗಡೆಯಾದ ಸಂದರ್ಭದಲ್ಲಿ ಅದು ಹೆಚ್ಚು ಜನಪ್ರಿಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT