ಬುಧವಾರ, ಜೂನ್ 29, 2022
24 °C

ಡಿಎಚ್‌ಎಫ್‌ಎಲ್‌ ವಿರುದ್ಧ ₹34,615 ಕೋಟಿ ವಂಚನೆ ಕೇಸ್

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದಿವಾನ್‌ ಹೌಸಿಂಗ್‌ ಫೈನಾನ್ಸ್ ಲಿಮಿಟೆಡ್‌ (ಡಿಎಚ್‌ ಎಫ್‌ಎಲ್‌), ಅದರ ಮಾಜಿ ಸಿಎಂಡಿ ಕಪಿಲ್ ವಾಧವನ್, ನಿರ್ದೇಶಕ ಧೀರಜ್ ವಾಧವನ್ ಮತ್ತು ಇತರರ ವಿರುದ್ಧ ₹ 34,615 ಕೋಟಿ ಬ್ಯಾಂಕ್ ವಂಚನೆ ಪ್ರಕರಣವನ್ನು ಸಿಬಿಐ ದಾಖಲಿಸಿದೆ. ಇದು ಸಿಬಿಐ ದಾಖಲಿಸಿರುವ ಅತಿದೊಡ್ಡ ಬ್ಯಾಂಕ್‌ ವಂಚನೆ ಪ್ರಕರಣ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಈ ಸಂಬಂಧ ಜೂನ್ 20ರಂದು ಸಿಬಿಐ ಪ್ರಕರಣ ದಾಖಲು ಮಾಡಿದೆ. ಎಫ್‌ಐಆರ್‌ನಲ್ಲಿ ಹೆಸರಿಸಲಾಗಿರುವ ‘ಅಮರಿಲ್ಲಿಸ್ ರೀಲರ್ಸ್‌’ನ ಸುಧಾಕರ್ ಶೆಟ್ಟಿ ಮತ್ತು ಇತರ ಎಂಟು ಬಿಲ್ಡರ್‌ಗಳಿಗೆ ಸೇರಿದ ಮುಂಬೈನ 12 ಸ್ಥಳಗಳ
ಮೇಲೆ ಸಿಬಿಐನ 50ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಬುಧವಾರ
ಶೋಧ ನಡೆಸಿದೆ.

2010 ಮತ್ತು 2018ರ ನಡುವೆ ₹ 42,871 ಕೋಟಿ ಸಾಲ ಸೌಲಭ್ಯಗಳ ವಿಸ್ತರಣೆಗೆ ಸಂಬಂಧಿಸಿದಂತೆ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟವು ನೀಡಿರುವ ದೂರಿನ ಮೇರೆಗೆ ಸಿಬಿಐ ಈ ಕ್ರಮ ತೆಗೆದುಕೊಂಡಿದೆ.

‘ಕಪಿಲ್ ಮತ್ತು ಧೀರಜ್ ವಾಧವನ್  ಅವರು ಇತರರೊಂದಿಗೆ ಸೇರಿ ಕ್ರಿಮಿನಲ್ ಪಿತೂರಿ ನಡೆಸಿದ್ದಾರೆ. ಅವರು ಸತ್ಯಗಳನ್ನು ಮರೆ ಮಾಚಿ, ಅವುಗಳನ್ನು ತಪ್ಪಾಗಿ ಬಿಂಬಿಸಿ, ಸಾರ್ವಜನಿಕ ಹಣ ದುರು ಪಯೋಗ ಪಡಿಸಿಕೊಂಡಿದ್ದಾರೆ. ಅವರು 2019ರ ಮೇ ತಿಂಗಳಿನಿಂದ ಸಾಲ ಮರುಪಾವತಿಸದೇ ಸುಸ್ತಿದಾರ
ರಾಗುವ ಮೂಲಕ ಒಕ್ಕೂಟಕ್ಕೆ ₹ 34,614 ಕೋಟಿ ವಂಚಿಸಿದ್ದಾರೆ ಎಂದು ಬ್ಯಾಂಕ್ ಆರೋಪಿಸಿದೆ.

ಈ ಹಿಂದಿನ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಇಬ್ಬರೂ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ. ಡಿಎಚ್‌ಎಫ್‌ಎಲ್‌ ಸಾಲದ ಖಾತೆಗಳನ್ನು ಸಾಲದಾತ ಬ್ಯಾಂಕ್‌ಗಳು ವಿವಿಧ ಸಮಯಗಳಲ್ಲಿ ಅನುತ್ಪಾದಕ ಸ್ವತ್ತು ಎಂದು ಘೋಷಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು