ಕಳೆದ ಆರ್ಥಿಕ ವರ್ಷದಲ್ಲಿ ರಿಯಲ್ ಎಸ್ಟೇಟ್ ಚಟುವಟಿಕೆ ಹಿನ್ನಡೆ ಕಂಡಿತ್ತು. ಇದು ನಗರ ಪ್ರದೇಶದಲ್ಲಿ ವಸತಿ ಯೋಜನೆಯ ಬೇಡಿಕೆಯನ್ನು ತಗ್ಗಿಸಿತ್ತು. ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರ ಕಡಿತಗೊಳಿಸಿದೆ. ಇದರಿಂದ ಗೃಹ ಸಾಲ ಅಗ್ಗವಾಗಲಿದ್ದು ಮನೆ ನಿರ್ಮಾಣ ಚಟುವಟಿಕೆಗಳು ಗರಿಗೆದರಲಿವೆ ಎಂದು ಕ್ರಿಸಿಲ್ ಹೇಳಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪರಿಣಾಮಕಾರಿ ಜಾರಿಗೆ ಸರ್ಕಾರ ಮುಂದಾಗಿದೆ. ಇದು ವಸತಿ ಸೌಕರ್ಯಕ್ಕೆ ಬಲ ನೀಡಲಿದ್ದು ಸಿಮೆಂಟ್‌ಗೆ ಬೇಡಿಕೆ ಹೆಚ್ಚಸಲಿದೆ ಎಂದು ವಿವರಿಸಿದೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್‌ವೈ) ಮತ್ತು ನರೇಗಾ ಅಡಿ ಕೈಗೊಳ್ಳುವ ಕಾಮಗಾರಿಗಳಿಂದ ಸಿಮೆಂಟ್‌ಗೆ ಬೇಡಿಕೆ ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಹೇಳಿದೆ.