ಜನ್‌ ಧನ್‌ಗೆ ಉತ್ತೇಜನ

7

ಜನ್‌ ಧನ್‌ಗೆ ಉತ್ತೇಜನ

Published:
Updated:

ನವದೆಹಲಿ: ಬ್ಯಾಂಕ್‌ಗಳಲ್ಲಿ ಜನ್‌ಧನ್‌ ಖಾತೆ ತೆರೆಯಲು ಹೆಚ್ಚಿನ ಉತ್ತೇಜನ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಹಣಕಾಸು ಸೇರ್ಪಡೆಯ ಈ ಮಹತ್ವಾಕಾಂಕ್ಷೆಯ ಯೋಜನೆಗೆ 2014ರ ಆಗಸ್ಟ್‌ನಲ್ಲಿ ಚಾಲನೆ ನೀಡಲಾಗಿತ್ತು. ಈ ಯೋಜನೆಯ ಯಶಸ್ಸಿನಿಂದ ಉತ್ತೇಜನಗೊಂಡಿರುವ ಕೇಂದ್ರ ಸರ್ಕಾರ, ಖಾತೆ ತೆರೆಯುವವರಿಗೆ  ಉತ್ತೇಜನ ನೀಡಲು ನಿರ್ಧರಿಸಿದೆ.  ‘ಪ್ರತಿ ಕುಟುಂಬ ಮತ್ತು ಪ್ರತಿಯೊಬ್ಬ ವಯಸ್ಕ ಇಂತಹ ಖಾತೆ ತೆರೆಯುವಂತೆ ಪ್ರೋತ್ಸಾಹ ನೀಡಲಾಗುವುದು’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

ಈ ಖಾತೆದಾರರಿಗೆ ಒದಗಿಸುತ್ತಿದ್ದ ಹೆಚ್ಚುವರಿ ಸಾಲ ಸೌಲಭ್ಯದ ಮೊತ್ತವನ್ನು (ಓವರ್‌ಡ್ರಾಫ್ಟ್‌)  ದುಪ್ಪಟ್ಟುಗೊಳಿಸಿ ₹ 10 ಸಾವಿರಕ್ಕೆ ಏರಿಸಲಾಗಿದೆ. ಉಚಿತ ಅಪಘಾತ ವಿಮೆಯ ಮೊತ್ತವನ್ನು ₹ 1 ಲಕ್ಷದಿಂದ ₹ 2 ಲಕ್ಷಕ್ಕೆ ಹೆಚ್ಚಿಸಲಾಗಿದೆ.  ₹  2 ಸಾವಿರವರೆಗಿನ ಓವರ್‌ಡ್ರಾಫ್ಟ್‌ಗೆ ಯಾವುದೇ ಷರತ್ತು ಇರುವುದಿಲ್ಲ. ಈ ಸೌಲಭ್ಯ ಪಡೆಯಲು ಗರಿಷ್ಠ ವಯೋಮಿತಿಯನ್ನು 60 ವರ್ಷಗಳಿಂದ 65 ವರ್ಷಗಳಿಗೆ ಹೆಚ್ಚಿಸಲಾಗಿದೆ.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !