ಕೊಚ್ಚರ್‌ ವಿರುದ್ಧ ಕ್ರಿಮಿನಲ್ ಪ್ರಕರಣ

7
ಐಸಿಐಸಿಐ–ವಿಡಿಯೊಕಾನ್‌ ಹಗರಣ: ಇ.ಡಿ ಕ್ರಮ

ಕೊಚ್ಚರ್‌ ವಿರುದ್ಧ ಕ್ರಿಮಿನಲ್ ಪ್ರಕರಣ

Published:
Updated:
Prajavani

ನವದೆಹಲಿ (ಪಿಟಿಐ): ಐಸಿಐಸಿಐ ಬ್ಯಾಂಕ್‌–ವಿಡಿಯೊಕಾನ್‌ ಹಗರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ನ ಸಿಇಒ ಚಂದಾ ಕೊಚ್ಚರ್‌, ಪತಿ ದೀಪಕ್‌ ಕೊಚ್ಚರ್‌, ವಿಡಿಯೊಕಾನ್‌ ಸಮೂಹದ ಪ್ರವರ್ತಕ ವೇಣುಗೋಪಾಲ್‌ ಧೂತ್ ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಕ್ರಿಮಿನಲ್‌ ಪ್ರಕರಣ ದಾಖಲಿಸಿದೆ.

ವಿಡಿಯೊಕಾನ್‌ ಸಮೂಹಕ್ಕೆ
₹ 1,875 ಕೋಟಿ ಸಾಲ ಮಂಜೂರಾ
ತಿಯಲ್ಲಿ ಅಕ್ರಮ ಎಸಗಿರುವು
ದಕ್ಕೆ ಸಂಬಂಧಿಸಿ
ದಂತೆ ಸಿಬಿಐ ದೂರು ದಾಖಲಿಸಿದೆ. ಇದನ್ನು ಪರಿಗಣಿಸಿ ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ (ಪಿಎಂಎಲ್‌ಎ) ಈ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿ
ಯೊಬ್ಬರು ತಿಳಿಸಿದ್ದಾರೆ.

ಜಾರಿ ನಿರ್ದೇಶನಾಲಯ ಶೀಘ್ರವೇ ಆಪಾದಿತರಿಗೆ ಸಮನ್ಸ್ ಜಾರಿ ಮಾಡುವ ನಿರೀಕ್ಷೆ ಇದೆ ಎಂದೂ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !