ಭಾನುವಾರ, ಸೆಪ್ಟೆಂಬರ್ 27, 2020
27 °C
ಆಸ್ತಿ ಸಲಹಾ ಸಂಸ್ಥೆ ಕೋಲಿಯರ್ಸ್‌ ವರದಿ

ಇ–ಕಾಮರ್ಸ್‌: ಸಣ್ಣ ಉಗ್ರಾಣಕ್ಕೆ ಬೇಡಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಇ–ಕಾಮರ್ಸ್‌

ನವದೆಹಲಿ: ಗ್ರಾಹಕರು ಖರೀದಿಯ ಮನವಿ ಸಲ್ಲಿಸಿದ ದಿನವೇ ಉತ್ಪನ್ನಗಳನ್ನು ಪೂರೈಸಲು ಇ–ಕಾಮರ್ಸ್‌ ಕಂಪನಿಗಳು ಮುಂದಾಗಿವೆ. ಇದರಿಂದ ನಗರ ವ್ಯಾಪ್ತಿಗಳಲ್ಲಿ ಸಣ್ಣ ಉಗ್ರಾಣಗಳಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿಯೊಂದು ತಿಳಿಸಿದೆ.

ಲಾಕ್‌ಡೌನ್‌ನಿಂದಾಗಿ ಜನರು ಆಹಾರ ಮತ್ತು ದಿನಸಿ ಉತ್ಪನ್ನಗಳಿಗಾಗಿ ಇ–ಕಾಮರ್ಸ್‌ ಮೊರೆ ಹೋಗಿದ್ದಾರೆ.  ಗ್ರಾಹಕರು ಬುಕ್‌ ಮಾಡಿದ ದಿನವೇ ಅವುಗಳನ್ನು ಪೂರೈಸಬೇಕಾಗುತ್ತದೆ. ಇಂತಹ ಉತ್ಪನ್ನಗಳನ್ನು ಇಡಲು ಸಣ್ಣ ಉಗ್ರಾಣಗಳು ಬೇಕಾಗುವುದರಿಂದ ಅವುಗಳ ಬೇಡಿಕೆ ಹೆಚ್ಚಾಗಲಿದೆ ಎಂದು ಆಸ್ತಿ ಸಲಹಾ ಸಂಸ್ಥೆ ಕೋಲಿಯರ್ಸ್‌ ಹೇಳಿದೆ.

ಗುಣಮಟ್ಟ ಕಾಯ್ದುಕೊಳ್ಳಲು ಮತ್ತು ಗ್ರಾಹಕರಿಗೆ ಬೇಗನೆ ವಿತರಿಸಲು ಅನುಕೂಲ ಆಗುವಂತೆ ಉತ್ಪನ್ನಗಳನ್ನು ಇಟ್ಟುಕೊಳ್ಳಲು ಸಣ್ಣ ಉಗ್ರಾಣಗಳು ಬೇಕಾಗಲಿವೆ ಎಂದು ಅಭಿಪ್ರಾಯಪಟ್ಟಿದೆ.

12 ತಿಂಗಳಿನಲ್ಲಿ ನಗರಗಳು ಉತ್ಪನ್ನಗಳನ್ನು ಪೂರೈಸುವ ಸಣ್ಣ ವಿತರಣಾ ಕೇಂದ್ರಗಳಾಗಲಿವೆ. ಬೆಂಗಳೂರು, ಮುಂಬೈ, ಚೆನ್ನೈ ಮತ್ತು ದೆಹಲಿ ರಾಜಧಾನ ಪ್ರದೇಶಗಳಲ್ಲಿ 5 ಸಾವಿರದಿಂದ 10 ಸಾವಿರ ಚದರ ಅಡಿಯ ಉಗ್ರಾಣಗಳಿಗೆ ಬೇಡಿಕೆ ಬರಲಿದೆ.

ಮುಖ್ಯಾಂಶಗಳು

5–10 ಸಾವಿರ ಚದರ ಅಡಿಯ ಉಗ್ರಾಣಗಳಿಗೆ ಬೇಡಿಕೆ

ಇ–ಕಾಮರ್ಸ್‌ಗೆ ದಿನಸಿ ಪೂರೈಕೆಗೆ ಅನುಕೂಲ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು