ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎನ್‌ಜಿ ದರ ಹೆಚ್ಚಳ

Last Updated 7 ಏಪ್ರಿಲ್ 2022, 15:34 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯಲ್ಲಿ ಸಿಎನ್‌ಜಿ ದರವನ್ನು ಗುರುವಾರ ಪ್ರತಿ ಕೆ.ಜಿ.ಗೆ ₹ 2.50ರಷ್ಟು ಹೆಚ್ಚಿಸಲಾಗಿದೆ. ಇಂದ್ರಪ್ರಸ್ಥ ಗ್ಯಾಸ್‌ ಲಿಮಿಟೆಡ್‌ನ ಜಾಲತಾಣದಲ್ಲಿ ಇರುವ ಮಾಹಿತಿ ಪ್ರಕಾರ, ಗುರುವಾರದ ದರ ಏರಿಕೆಯಿಂದಾಗಿ ದೆಹಲಿಯಲ್ಲಿ ಸಿಎನ್‌ಜಿ ದರವು ಕೆ.ಜಿ.ಗೆ ₹ 69.11ಕ್ಕೆ ಏರಿಕೆ ಆಗಿದೆ.

ಮಾರ್ಚ್‌ 7ರಿಂದ ಏಪ್ರಿಲ್‌ 7ರವರೆಗೆ ಒಟ್ಟಾರೆ 10 ಬಾರಿ ದರ ಹೆಚ್ಚಳ ಮಾಡಿದ್ದು, ಕೆ.ಜಿಗೆ ₹ 13.1ರಷ್ಟು ಏರಿಕೆ ಆದಂತಾಗಿದೆ. ಸ್ಥಳೀಯ ಮಾರಾಟ ತೆರಿಗೆಗೆ ಅನುಗುಣವಾಗಿ ರಾಜ್ಯದಿಂದ ರಾಜ್ಯಕ್ಕೆ ದರದಲ್ಲಿ ವ್ಯತ್ಯಾಸ ಆಗುತ್ತದೆ. ಮುಂಬೈನಲ್ಲಿ ಕೆ.ಜಿ.ಗೆ ₹ 7ರಷ್ಟು ಹೆಚ್ಚಾಗಿ, ₹ 67ಕ್ಕೆ, ಗುಜರಾತ್‌ನಲ್ಲಿ ₹ 6.50ರಷ್ಟು ಹೆಚ್ಚಾಗಿ ₹ 76.98ಕ್ಕೆ ಏರಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT