ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾಕೇಜ್ಡ್‌ ಪದಾರ್ಥ ಖರೀದಿಗೆ ಆದ್ಯತೆ

Last Updated 4 ಮೇ 2020, 4:39 IST
ಅಕ್ಷರ ಗಾತ್ರ

ನವದೆಹಲಿ: ಎರಡನೇ ಹಂತದ ಲಾಕ್‌ಡೌನ್‌ ಸಂದರ್ಭದಲ್ಲಿ ಗ್ರಾಹಕರ ಖರೀದಿ ಮನೋವೃತ್ತಿಯಲ್ಲಿ ಗುರುತರವಾದ ಬದಲಾವಣೆ ಕಂಡುಬಂದಿದೆ ಎಂದು ರಿಟೇಲ್‌ ಕಂಪನಿಗಳು ತಿಳಿಸಿವೆ.

ಅಗತ್ಯ ವಸ್ತುಗಳ ಖರೀದಿಗೆ ಬದಲಾಗಿ ಕುರುಕಲು ತಿಂಡಿ, ಸಂಸ್ಕರಿಸಿದ ಆಹಾರ ಪದಾರ್ಥಗಳು, ಪ್ಯಾಕ್‌ ಆಗಿರುವ ಮಾಂಸ ಮತ್ತು ಹಣ್ಣು, ಸಿಹಿ ತಿನಿಸುಗಳಿಗೆ ಬೇಡಿಕೆ ಹೆಚ್ಚಿದೆ ಎಂದು ಫ್ಯೂಚರ್‌ ಗ್ರೂಪ್‌, ಮೆಟ್ರೊ ಮತ್ತು ಲಾಟ್ಸ್‌ ಹೋಲ್‌ಸೇಲ್‌ ಕಂಪನಿಗಳು ತಿಳಿಸಿವೆ.

ಮನೆಯಿಂದ ಕೆಲಸ ಮಾಡುತ್ತಿರುವುದರಿಂದಾಗಿ ಸ್ಕ್ಯಾಕ್ಸ್‌, ಬಿಸ್ಕತ್‌ ಮತ್ತು ಪಾನೀಯಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಮೆಟ್ರೊ ಕ್ಯಾಷ್‌ ಆ್ಯಂಡ್‌ ಕ್ಯಾರಿ ಇಂಡಿಯಾದ ಎಂಡಿ ಅರವಿಂದ ಎಂ ಅವರು ತಿಳಿಸಿದ್ದಾರೆ.

ಮೆಟ್ರೊ ಮಳಿಗೆಗಳಲ್ಲಿ ಕಂಪ್ಯೂಟರ್‌, ಮೌಸ್‌, ಕಿಬೋರ್ಡ್‌, ಚಾರ್ಜರ್‌ಗಳಿಗೆ ಬೇಡಿಕೆ ಬರುತ್ತಿದೆ ಎಂದು ತಿಳಿಸಿದ್ದಾರೆ.

ಮೊದಲ ಹಂತದ ಲಾಕ್‌ಡೌನ್‌ನಲ್ಲಿ ಗೋಧಿ, ಬೇಳೆಕಾಳು, ಸಕ್ಕರೆ ಖರೀದಿಸುತ್ತಿದ್ದ ಗ್ರಾಹಕರು ಎರಡನೇ ಹಂತದಲ್ಲಿ ಬಿಸ್ಕತ್, ನೂಡಲ್ಸ್‌ ಮತ್ತು ಪಾಸ್ತಾ ಖರೀದಿಗೆ ಹೆಚ್ಚು ಗಮನ ನೀಡುತ್ತಿದ್ದಾರೆ ಎಂದು ಫ್ಯೂಚರ್‌ ಗ್ರೂಪ್‌ನ ಅಧ್ಯಕ್ಷ ಕಮಲ್‌ದೀಪ್‌ ಸಿಂಗ್‌ ತಿಳಿಸಿದ್ದಾರೆ.

ಅಗತ್ಯ ವಸ್ತುಗಳ ಖರೀದಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ, ಕೊರತೆಯೂ ಇಲ್ಲ ಎನ್ನುವುದುಮನವರಿಕೆ ಆದ ಮೇಲೆ ಆತಂಕಕ್ಕೆ ಒಳಗಾಗಿ ಅಗತ್ಯಕ್ಕಿಂತ ಹೆಚ್ಚಿನ ಖರೀದಿ ಮಾಡುವುದನ್ನು ನಿಲ್ಲಿಸಿದ್ದಾರೆ ಎಂದೂ ಕಂಪನಿಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT