ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ಮೂಲಸೌಕರ್ಯ ವಲಯ

ಆಗಸ್ಟ್‌ನಲ್ಲಿ ಮೂರುವರೆ ವರ್ಷಗಳ ಕನಿಷ್ಠ ಮಟ್ಟವಾದ ಶೇ 0.5ಕ್ಕೆ ಇಳಿಕೆ
Last Updated 30 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಮೂಲಸೌಕರ್ಯ ವಲಯದ ಪ್ರಮುಖ 8 ಕೈಗಾರಿಕೆಗಳ ಬೆಳವಣಿಗೆಯು ಆಗಸ್ಟ್‌ನಲ್ಲಿಯೂ ಮೂರುವರೆ ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿದೆ.

2019ರ ಆಗಸ್ಟ್‌ನಲ್ಲಿ ಶೇ 0.5ರಷ್ಟು ಅತ್ಯಲ್ಪ ಬೆಳವಣಿಗೆ ಕಂಡಿದೆ.2018ರ ಆಗಸ್ಟ್‌ನಲ್ಲಿ ಶೇ 4.7ರಷ್ಟು ಪ್ರಗತಿ ಕಂಡಿದ್ದವು. ಇದಕ್ಕೆ ಹೋಲಿಸಿದರೆ 2019ರಲ್ಲಿ ಶೇ 4.2ರಷ್ಟು ಕುಸಿತ ಕಂಡಿದೆ.

ಈ ಹಿಂದೆ 2015ರ ನವೆಂಬರ್‌ನಲ್ಲಿ ಶೇ (–) 1.3ರಷ್ಟು ನಕಾರಾತ್ಮಕ ಬೆಳವಣಿಗೆ ಕಂಡಿತ್ತು.

ಕಲ್ಲಿದ್ದಲು, ಕಚ್ಚಾ ತೈಲ, ಮತ್ತು ನೈಸರ್ಗಿಕ ಅನಿಲ ಮತ್ತು ವಿದ್ಯುತ್‌ ವಲಯಗಳು ನಕಾರಾತ್ಮಕ ಬೆಳವಣಿಗೆ ಕಂಡಿವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಾಹಿತಿ ನೀಡಿದೆ.

ರಸಗೊಬ್ಬರ, ಉಕ್ಕು ವಲಯದ ಬೆಳವಣಿಗೆಯಲ್ಲಿ ಏರಿಕೆ ಕಂಡುಬಂದಿದೆ.

ಏಪ್ರಿಲ್‌–ಆಗಸ್ಟ್‌ ಅವಧಿಯಲ್ಲಿಯೂ 8 ಕೈಗಾರಿಕೆಗಳ ಬೆಳವಣಿಗೆ ಶೇ 5.7ರಿಂದ ಶೇ 2.4ಕ್ಕೆ ಇಳಿಕೆಯಾಗಿದೆ.

8 ಕೈಗಾರಿಕೆಗಳು: ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ತೈಲಾಗಾರ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್‌ ಮತ್ತು ವಿದ್ಯುತ್‌ಇವು ಪ್ರಮುಖ 8 ಕೈಗಾರಿಕೆಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT