ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊವಿಡ್‌ಗೆ ವಿಮೆ ಸೌಲಭ್ಯ ಆರಂಭಿಸಿದ ಸ್ಟಾರ್‌ ಹೆಲ್ತ್‌

Last Updated 21 ಮಾರ್ಚ್ 2020, 1:20 IST
ಅಕ್ಷರ ಗಾತ್ರ

ಮುಂಬೈ: ನೊವೆಲ್‌ ಕೊರೊನಾವೈರಸ್‌ (ಕೊವಿಡ್‌–19) ಸೋಂಕಿಗೆ ಒಳಗಾಗಿ ಪಾಸಿಟಿವ್ ವರದಿ ಪಡೆದವರು ಮತ್ತು ಆಸ್ಪತ್ರೆಗೆ ದಾಖಲಾಗುವವರ ಅನುಕೂಲಕ್ಕಾಗಿ ಸ್ಟಾರ್‌ ಹೆಲ್ತ್‌ ಆ್ಯಂಡ್‌ ಅಲೈಡ್‌ ಇನ್ಶುರನ್ಸ್‌ ವಿಮೆ ಪಾಲಿಸಿ ಆರಂಭಿಸಿದೆ.

‘ಸ್ಟಾರ್‌ ನೊವೆಲ್‌ ಕೊರೊನಾವೈರಸ್‌’ ಪಾಲಿಸಿಯು 18 ರಿಂದ 65 ವರ್ಷದ ಒಳಗಿನವರಿಗೆ ₹ 21 ಸಾವಿರ ಮತ್ತು ₹ 42 ಸಾವಿರ ಮೊತ್ತದ ವಿಮೆ ಪರಿಹಾರದ ಎರಡು ಯೋಜನೆಗಳನ್ನು ಪರಿಚಯಿಸಿದೆ. ಇವುಗಳ ಪ್ರೀಮಿಯಂ ಮೊತ್ತವು ಕ್ರಮವಾಗಿ ₹ 459 ಮತ್ತು ₹ 918 ಇರಲಿದೆ. ಎರಡೂ ಪಾಲಿಸಿಗಳಿಗೆ ಜಿಎಸ್‌ಟಿ ಪ್ರತ್ಯೇಕವಾಗಿರಲಿದೆ. ಆನ್‌ಲೈನ್‌ ಇಲ್ಲವೇ ಕಂಪನಿಯ ಏಜೆಂಟರ ಮೂಲಕ ಪಾಲಿಸಿ ಖರೀದಿಸಬಹುದು. ಪಾಲಿಸಿ ಖರೀದಿಸುವ ಮುನ್ನ ವೈದ್ಯಕೀಯ ತಪಾಸಣೆಗೆ ಒಳಗಾಗುವ ಅಗತ್ಯ ಇಲ್ಲ. ವಿದೇಶಗಳಿಂದ ಮರಳಿದವರೂ ಈ ಪಾಲಿಸಿ ಖರೀದಿಸಬಹುದು. ಈ ಪಾಲಿಸಿಯು ಆಸ್ಪತ್ರೆ ವೆಚ್ಚ ಭರಿಸಲು ನೆರವಾಗಲಿದೆ ಎಂದು ಕಂಪನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT