ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯ: ನವೆಂಬರ್‌ನಲ್ಲಿ ಶೇ 3.1ರಷ್ಟು ಬೆಳವಣಿಗೆ

Last Updated 1 ಜನವರಿ 2022, 10:42 IST
ಅಕ್ಷರ ಗಾತ್ರ

ನವದೆಹಲಿ: ಮೂಲಸೌಕರ್ಯದ ಪ್ರಮುಖ ಎಂಟು ಕೈಗಾರಿಕಾ ವಲಯಗಳ ಬೆಳವಣಿಗೆಯು ನವೆಂಬರ್‌ನಲ್ಲಿ ಶೇ 3.1ರಷ್ಟಾಗಿದೆ. ಫೆಬ್ರುವರಿ ಬಳಿಕ ಅತ್ಯಂತ ಕನಿಷ್ಠ ಬೆಳವಣಿಗೆ ದರ ಇದಾಗಿದೆ

ಅಕ್ಟೋಬರ್‌ನಲ್ಲಿ ಶೇ 8.4ರಷ್ಟು ಬೆಳವಣಿಗೆ ಕಂಡಿದ್ದವು. 2020ರ ನವೆಂಬರ್‌ನಲ್ಲಿ ಬೆಳವಣಿಗೆಯು ಶೇ 1.1ಕ್ಕೆ ಇಳಿಕೆ ಆಗಿತ್ತು. ಇದಕ್ಕೆ ಹೋಲಿಸಿದರೆ 2021ರ ನವೆಂಬರ್‌ನಲ್ಲಿ ಬೆಳವಣಿಗೆ ದರ ಹೆಚ್ಚಾಗಿದೆ.

ಕಚ್ಚಾ ತೈಲ ಮತ್ತು ಸಿಮೆಂಟ್‌ ಹೊರತುಪಡಿಸಿ ಉಳಿದೆಲ್ಲಾ ವಲಯಗಳು ಸಕಾರಾತ್ಮಕ ಬೆಳವಣಿಗೆ ಕಂಡಿವೆ. ಕಲ್ಲಿದ್ದಲು ಉತ್ಪಾದನೆಯು ಶೇ 8.2ರಷ್ಟು, ನೈಸರ್ಗಿಕ ಅನಿಲ ಶೇ 23.7ರಷ್ಟು, ಸಂಸ್ಕರಣಾ ಉತ್ಪನ್ನಗಳು ಶೇ 4.3ರಷ್ಟು, ರಸಗೊಬ್ಬರ ಶೇ 2.5, ಉಕ್ಕು ಶೇ 0.8 ಮತ್ತು ವಿದ್ಯುತ್‌ ಶೇ 1.5ರಷ್ಟು ಬೆಳವಣಿಗೆ ಕಂಡಿವೆ.

ಈ ವಲಯಗಳು ದೇಶದ ಕೈಗಾರಿಕಾ ಉತ್ಪಾದನಾ ಸೂಚ್ಯಂಕಕ್ಕೆ (ಐಐಪಿ) ಶೇ 40.27ರಷ್ಟು ಕೊಡುಗೆ ನೀಡುತ್ತಿವೆ.

ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌–ನವೆಂಬರ್‌ ಅವಧಿಯಲ್ಲಿ ಕಲ್ಲಿದ್ದಲು, ಕಚ್ಚಾತೈಲ, ನೈಸರ್ಗಿಕ ಅನಿಲ, ಸಂಸ್ಕರಣಾ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್‌ ಮತ್ತು ವಿದ್ಯುತ್ ವಲಯಗಳ ಬೆಳವಣಿಗೆಯು ಶೇ 13.7ರಷ್ಟಾಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಈ ವಲಯಗಳು ಶೇ 11.1ರಷ್ಟು ಬೆಳವಣಿಗೆ ಕಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT