ಗುರುವಾರ , ಆಗಸ್ಟ್ 11, 2022
28 °C

ಮಹಿಳಾ ಉದ್ಯಮಿಗಳಿಗೆ ರಾಜ್ಯದಲ್ಲಿ ಪ್ರೋತ್ಸಾಹ: ರತ್ನಪ್ರಭಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮಹಿಳಾ ಉದ್ಯಮಿ ಗಳನ್ನು ಪ್ರೋತ್ಸಾಹಿಸುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ’ ಎಂದು ಉಬುಂಟು ಒಕ್ಕೂಟದ ಸಂಸ್ಥಾಪನಾ ಅಧ್ಯಕ್ಷೆ ರತ್ನಪ್ರಭಾ ತಿಳಿಸಿದರು. 

ಕಾಮನ್‌ವೆಲ್ತ್ ಸೆಕ್ರೆಟರಿಯೇಟ್ ಸಹಯೋಗದಲ್ಲಿ ಏಷ್ಯಾ ಮತ್ತು ಪೆಸಿಫಿಕ್ ಸೌತ್ ಹಾಗೂ ಸೌತ್-ವೆಸ್ಟ್ ಏಷ್ಯಾ ಆಫೀಸ್ ಇತ್ತೀಚೆಗೆ 
ಮಾಲ್ಡೀವ್ಸ್‌ನಲ್ಲಿ ಆಯೋಜಿಸಿದ್ದ ಮಹಿಳಾ ಉದ್ಯಮಿಗಳ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು. 

‘ಉಬುಂಟು ಒಕ್ಕೂಟವು 9 ರಾಜ್ಯಗಳಿಂದ 33 ಸಂಘಗಳನ್ನು ಹೊಂದಿದೆ. ಅವುಗಳು 22 ಸಾವಿರಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳ ಪರೋಕ್ಷ ಸದಸ್ಯತ್ವದೊಂದಿಗೆ ಸಂಯೋಜಿತವಾಗಿವೆ. ಒಕ್ಕೂಟವು ಮಹಿಳಾ ಉದ್ಯಮಿಗಳ ಬಗ್ಗೆ ಕಾಳಜಿ ಹೊಂದಿರುವ ಜೊತೆಗೆ ಹಲವಾರು ಮಹಿಳಾ ಉದ್ಯಮಿಗಳ ಭಾಗವಹಿಸುವಿಕೆಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸು
ತ್ತಿದೆ’ ಎಂದು ಹೇಳಿದರು. 

ವಿಶ್ವಸಂಸ್ಥೆಯ ಸ್ಥಾನಿಕ ಸಂಯೋಜನಾಧಿಕಾರಿ ಕ್ಯಾಥರೀನ್ ಹಾಸ್ವೆಲ್, ‘ಕೋವಿಡ್ ಬಳಿಕ ಮಹಿಳಾ ಉದ್ಯಮಿಗಳು ತಮ್ಮ ವ್ಯಾಪಾರ ವ್ಯವಹಾರ ಅಭಿವೃದ್ಧಿ ಪಡಿಸಿಕೊಳ್ಳಲು ಡಿಜಿಟಲ್ ವೇದಿಕೆ ಬಳಸಿಕೊಂಡಿದ್ದರಿಂದ ಉದ್ಯಮದಲ್ಲಿ ಯಶಸ್ಸು ಸಾಧ್ಯವಾಯಿತು’ ಎಂದರು. 

ಮಾಲ್ಡೀವ್ಸ್‌ನ ರಾಜ್ಯ ಸಚಿವೆ ಜಿಲ್ಫೀನಾ ಹಸನ್, ‘ಆನ್‌ಲೈನ್ ಮಾರುಕಟ್ಟೆ ಬೆಳೆಯುತ್ತಿದ್ದು, ಡಿಜಿಟಲ್ ವೇದಿಕೆಗಳನ್ನು ಬಳಸಿಕೊಳ್ಳಬೇಕು’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.