ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30 ನಿಮಿಷದೊಳಗೆ ಪ್ರಯಾಣಿಕರಿಗೆ ಲಗೇಜು ತಲುಪಿಸಿ: ಬಿಸಿಎಎಸ್‌

Published 18 ಫೆಬ್ರುವರಿ 2024, 16:28 IST
Last Updated 18 ಫೆಬ್ರುವರಿ 2024, 16:28 IST
ಅಕ್ಷರ ಗಾತ್ರ

ನವದೆಹಲಿ:‌ ನಿಲ್ದಾಣದಲ್ಲಿ ವಿಮಾನ ಇಳಿದ (ನಿಲುಗಡೆಯಾದ) 30 ನಿಮಿಷದೊಳಗೆ ಪ್ರಯಾಣಿಕರಿಗೆ ಅವರ ಲಗೇಜುಗಳನ್ನು ತಲುಪಿಸುವಂತೆ ವಿಮಾನಯಾನ ಸಂಸ್ಥೆಗಳಿಗೆ ವಿಮಾನಯಾನ ಭದ್ರತಾ ಸಂಸ್ಥೆ (ಬಿಸಿಎಎಸ್‌) ನಿರ್ದೇಶನ ನೀಡಿದೆ.

ಲಗೇಜುಗಳನ್ನು 30 ನಿಮಿಷದೊಳಗೆ ತಲುಪಿಸಲು ಅಗತ್ಯವಾದ ಕ್ರಮಗಳನ್ನು ಫೆಬ್ರವರಿ 26ರೊಳಗೆ ಜಾರಿಗೆ ತರಲು  ವಿಮಾನಯಾನ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ ಎಂದು ಭಾನುವಾರ ಅಧಿಕೃತ ಹೇಳಿಕೆ ತಿಳಿಸಿದೆ.

ಏರ್‌ ಇಂಡಿಯಾ, ಇಂಡಿಗೊ ಸೇರಿದಂತೆ ಏಳು ವಿಮಾನಯಾನ ಸಂಸ್ಥೆಗಳು ತಮ್ಮ ಪ್ರಯಾಣಿಕರಿಗೆ ಲಗೇಜುಗಳನ್ನು ವಿಳಂಬವಾಗಿ ನೀಡುತ್ತಿವೆ ಎಂಬ ಕಾರಣದಿಂದ ಫೆಬ್ರುವರಿ 16ರಂದು ಈ ನಿರ್ದೇಶನ ನೀಡಿದೆ.

ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಸೂಚನೆಯಂತೆ ಬಿಸಿಎಎಸ್‌ ಪ್ರಮುಖ ಆರು ವಿಮಾನ ನಿಲ್ದಾಣಗಳ ಬೆಲ್ಟ್‌ಗಳಲ್ಲಿ ಲಗೇಜ್‌ ನಿರ್ವಹಣೆಯ ಮೇಲ್ವಿಚಾರಣೆ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT