ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ನಲ್ಲಿ ಸೇವೆ ಪಡೆಯಲು ಭವಿಷ್ಯ ನಿಧಿ ಸಂಘಟನೆ ಸಲಹೆ

Last Updated 20 ಮಾರ್ಚ್ 2020, 19:11 IST
ಅಕ್ಷರ ಗಾತ್ರ

ನವದೆಹಲಿ: ‘ಕೊರೊನಾ–2’ ವೈರಸ್‌ ಹಬ್ಬುವುದನ್ನು ತಡೆಗಟ್ಟಲು ಪಿಂಚಣಿದಾರರು ಮತ್ತು ಉದ್ಯೋಗದಾತರು ಕಚೇರಿಗಳಿಗೆ ಭೇಟಿ ನೀಡುವುದನ್ನು ತಪ್ಪಿಸಬೇಕು ಎಂದು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಮನವಿ ಮಾಡಿಕೊಂಡಿದೆ.

ಸಂಘಟನೆಯ ಆನ್‌ಲೈನ್‌ ತಾಣದಲ್ಲಿ ಬಹುತೇಕ ಸೇವೆಗಳು ಲಭ್ಯ ಇರುವುದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸೂಚಿಸಿದೆ.

ಉದ್ಯೋಗಿಗಳು ತಮ್ಮ ಸಾರ್ವತ್ರಿಕ ಖಾತೆ ಸಂಖ್ಯೆ (ಯುಎಎನ್‌) ಸೃಷ್ಟಿಸಿ ಅದಕ್ಕೆ ಚಾಲನೆ ನೀಡುವ, ಆಧಾರ್‌, ಪ್ಯಾನ್‌, ಬ್ಯಾಂಕ್‌ ಖಾತೆ ಮತ್ತು ಮೊಬೈಲ್‌ಗೆ ಜೋಡಿಸುವ ಸೌಲಭ್ಯ ಆನ್‌ಲೈನ್‌ನಲ್ಲಿ ಲಭ್ಯ ಇದೆ. ನಾಮನಿರ್ದೇಶನ, ಪಾಸ್‌ಬುಕ್‌ ಬ್ಯಾಲನ್ಸ್‌, ಖಾತೆ ವರ್ಗಾವಣೆ ಮತ್ತಿತರ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು.

ಪಿಂಚಣಿದಾರರು ತಮ್ಮ ಬ್ಯಾಂಕ್‌ ಖಾತೆ ಅಥವಾ ‘ಯುಎಎನ್‌’ ನೆರವಿನಿಂದ ತಮ್ಮ ಪೆನ್ಶನ್‌ ಪೇಮೆಂಟ್‌ ಆರ್ಡರ್ (ಪಿಪಿಒ) ಸಂಖ್ಯೆ ತಿಳಿದುಕೊಳ್ಳಬಹುದು. ಆನ್‌ಲೈನ್‌ನಲ್ಲಿ ದೊರೆಯುವ ವಿವಿಧ ಸೇವೆಗಳು ಅಂತರ್ಜಾಲ ತಾಣ www.epfindia.gov.in ದಲ್ಲಿ ಲಭ್ಯ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT