ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಪಿಎಫ್‌ಒ: ಚಂದಾದಾರರ ಪ್ರಮಾಣ ಹೆಚ್ಚಳ

Last Updated 20 ಏಪ್ರಿಲ್ 2021, 17:13 IST
ಅಕ್ಷರ ಗಾತ್ರ

ನವದೆಹಲಿ: ನೌಕರರ ಭವಿಷ್ಯನಿಧಿ ಸಂಘಟನೆಗೆ (ಇಪಿಎಫ್ಒ) ಚಂದಾದಾರರಾದ ನೌಕರರ ಸಂಖ್ಯೆಯು ಹಿಂದಿನ ವರ್ಷದ ಫೆಬ್ರುವರಿಗೆ ಹೋಲಿಸಿದರೆ ಈ ವರ್ಷದ ಫೆಬ್ರುವರಿಯಲ್ಲಿ ಸರಿಸುಮಾರು ಶೇಕಡ 20ರಷ್ಟು ಜಾಸ್ತಿ ಆಗಿದೆ. ಈ ಫೆಬ್ರುವರಿಯಲ್ಲಿ ಒಟ್ಟು 12.37 ಲಕ್ಷ ನೌಕರರು ಸಂಘಟನೆಯ ವ್ಯಾಪ್ತಿಗೆ ಬಂದಿದ್ದಾರೆ.

ಕೋವಿಡ್–19 ಸಾಂಕ್ರಾಮಿಕದ ಸಂದರ್ಭದಲ್ಲಿ ಸಂಘಟಿತ ವಲಯದಲ್ಲಿ ಎಷ್ಟು ಉದ್ಯೋಗ ಸೃಷ್ಟಿಯಾಗಿದೆ ಎಂಬುದನ್ನು ಮಂಗಳವಾರ ಬಿಡುಗಡೆ ಆಗಿರುವ ಈ ಅಂಕಿ–ಅಂಶಗಳು ಹೇಳುತ್ತಿವೆ. ಈ ವರ್ಷದ ಜನವರಿಯಲ್ಲಿ ಇಪಿಎಫ್‌ಒ ವ್ಯಾಪ್ತಿಗೆ ಬಂದ ನೌಕರರ ಸಂಖ್ಯೆಗೆ ಹೋಲಿಸಿದರೆ, ಫೆಬ್ರುವರಿಯಲ್ಲಿ ಆಗಿರುವ ಹೆಚ್ಚಳವು ಶೇ 3.52ರಷ್ಟಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ಹೇಳಿದೆ.

ಫೆಬ್ರುವರಿಯಲ್ಲಿ ಇಪಿಎಫ್‌ಒ ವ್ಯಾಪ್ತಿಗೆ ಬಂದ ಒಟ್ಟು ನೌಕರರ ಪೈಕಿ 7.56 ಲಕ್ಷ ಮಂದಿ ಇದೇ ಮೊದಲ ಬಾರಿಗೆ ಇಪಿಎಫ್‌ಒ ವ್ಯಾಪ್ತಿಗೆ ಬಂದವರು. 4.81 ಲಕ್ಷ ಮಂದಿ ತಮ್ಮ ಉದ್ಯೋಗ ಬದಲಿಸಿ, ಇಪಿಎಫ್‌ಒ ವ್ಯಾಪ್ತಿಯಿಂದ ಒಮ್ಮೆ ಹೊರನಡೆದು, ಮತ್ತೆ ಅದರ ವ್ಯಾಪ್ತಿಗೆ ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT