ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಕೆಂಡ್‌ ಹ್ಯಾಂಡ್‌ ಕಾರ್‌ ಮಾರಾಟ ಹೆಚ್ಚಲಿದೆ: ಮರ್ಸಿಡಿಸ್‌ ಬೆಂಜ್‌ ಅಂದಾಜು

Last Updated 21 ಜೂನ್ 2020, 14:10 IST
ಅಕ್ಷರ ಗಾತ್ರ

ನವದೆಹಲಿ: ದೇಶದ ವಾಹನ ಉದ್ಯಮದ ಮೇಲೆಕೋವಿಡ್‌ ಪರಿಣಾಮ ಮುಂದುವರಿಯಲಿದ್ದು, ತನ್ನಸೆಕೆಂಡ್‌ ಹ್ಯಾಂಡ್‌ ಕಾರುಗಳ ಮಾರಾಟದಲ್ಲಿ ಏರಿಕೆಯಾಗಲಿದೆ ಎಂದು ಐಷಾರಾಮಿ ಕಾರು ತಯಾರಿಕಾ ಕಂಪನಿ ಮರ್ಸಿಡಿಸ್‌ ಬೆಂಜ್‌ ನಿರೀಕ್ಷೆ ಮಾಡಿದೆ.

‘ಮೊದಲ ಬಾರಿಗೆ ಕಾರ್‌ ಖರೀದಿಸುವ ಇಚ್ಛೆ ಇರುವವರು ಹೊಸ ಕಾರ್‌ ಖರೀದಿಸುವುದಕ್ಕೂ ಮೊದಲು ಸೆಕೆಂಡ್‌ ಹ್ಯಾಂಡ್‌ ಕಾರುಗಳನ್ನು ಖರೀದಿಸಿ, ಚಾಲನಾ ಅನುಭವ ಪಡೆದುಕೊಳ್ಳುತ್ತಿದ್ದಾರೆ. ಈ ಕಾರಣಕ್ಕಾಗಿ ಸೆಕೆಂಡ್‌ ಹ್ಯಾಂಡ್‌ ಕಾರ್‌ಗಳ ಮಾರಾಟ ಹೆಚ್ಚಾಗುವ ನಿರೀಕ್ಷೆ ಮಾಡಿದ್ದೇವೆ’ ಎಂದು ಮರ್ಸಿಡಿಸ್‌ ಬೆಂಜ್‌ ಇಂಡಿಯಾದ ಸಿಇಒ ಮಾರ್ಟಿನ್‌ ಶ್ವೆಂಕ್‌ ತಿಳಿಸಿದ್ದಾರೆ.

‘ಕಂಪನಿಯ ಬೆಳವಣಿಗೆಗೆ ಸೆಕೆಂಡ್‌ ಹ್ಯಾಂಡ್‌ ಕಾರ್‌ ವಹಿವಾಟು ಬಹಳ ಮುಖ್ಯವಾಗಿದೆ. ಈ ವಿಭಾಗದಲ್ಲಿ 9 ವರ್ಷಗಳನ್ನು ಪೂರೈಸಲಾಗಿದೆ.ಸೇವೆ, ಹಣಕಾಸು ಕೊಡುಗೆಗಳು ಮತ್ತು ಬ್ರ್ಯಾಂಡ್‌ ಅನುಭವವು ಹೊಸ ಕಾರ್‌ಗಳಿಗೆ ಸರಿಸಮನಾಗಿದೆ. ಆನ್‌ಲೈನ್‌ ಮೂಲಕವೂ ಇಂತಹ ಕಾರ್‌ಗಳ ಮಾರಾಟಕ್ಕೆ ಉತ್ತಮ ಬೇಡಿಕೆ ಬರುತ್ತಿದೆ.

ಹಬ್ಬದಲ್ಲಿ ಬೇಡಿಕೆ ನಿರೀಕ್ಷೆ: ‘ಸದ್ಯದ ಮಾರುಕಟ್ಟೆ ಪರಿಸ್ಥಿತಿಯು ಬಹಳಷ್ಟು ಸವಾಲುಗಳಿಂದ ಕೂಡಿದೆ. ಕಳೆದ ವರ್ಷ ಮಾರಾಟ ಮಾಡಿದ್ದಷ್ಟು ಈ ವರ್ಷ ಆಗುವ ಸಾಧ್ಯತೆ ಕಡಿಮೆ ಇದೆ. ಹಬ್ಬದ ಸಂದರ್ಭದಲ್ಲಿ ಬೇಡಿಕೆ ಸೃಷ್ಟಿಯಾಗುವ ನಿರೀಕ್ಷೆ ಮಾಡಲಾಗುತ್ತಿದೆ.

‘ಜನರು ಷೋರೂಂಗಳಿಗೆ ಭೇಟಿ ನೀಡಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ಆನ್‌ಲೈನ್‌ ವೇದಿಕೆಯನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ. ಆನ್‌ಲೈನ್‌ ಖರೀದಿಯು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮಾರಾಟ ಕಾರ್ಯತಂತ್ರ ರೂಪಿಸಲಾಗುತ್ತಿದೆ. ಈಗಾಗಲೇ 100ಕ್ಕೂ ಅಧಿಕ ಕಾರ್‌ಗಳಿಗೆ ಆನ್‌ಲೈನ್‌ ಬುಕಿಂಗ್ ಆಗಿದೆ’ ಎಂದು ಅವರು ತಿಳಿಸಿದ್ದಾರೆ.

ಸೆಕೆಂಡ್‌ ಹ್ಯಾಂಡ್‌ ಕಾರ್‌

20,500

ಐದು ವರ್ಷಗಳಲ್ಲಿ ಮಾರಾಟ

20%

ಮಾರಾಟದಲ್ಲಿ ಒಟ್ಟಾರೆ ಪ್ರಗತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT