ಸೋಮವಾರ, ಮೇ 10, 2021
25 °C

ಮಾರ್ಚ್‌ನಲ್ಲಿ ರಫ್ತು ವಹಿವಾಟು ಶೇ 60ರಷ್ಟು ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದ ರಫ್ತು ವಹಿವಾಟು ಮಾರ್ಚ್‌ನಲ್ಲಿ ಶೇಕಡ 60.29ರಷ್ಟು ಏರಿಕೆ ಆಗಿದ್ದು, ₹ 2.54 ಲಕ್ಷ ಕೋಟಿಗೆ ತಲುಪಿದೆ. ಆದರೆ, 2020–21ನೇ ಹಣಕಾಸು ವರ್ಷದಲ್ಲಿ ರಫ್ತು ವಹಿವಾಟು ಶೇ 7.26ರಷ್ಟು ಇಳಿಕೆ ಆಗಿದೆ.

ಆಮದು ವಹಿವಾಟು ಮಾರ್ಚ್‌ನಲ್ಲಿ ಶೇ 53.74ರಷ್ಟು ಹೆಚ್ಚಾಗಿದ್ದು, ₹ 3.58 ಲಕ್ಷ ಕೋಟಿಗೆ ತಲುಪಿದೆ. ಆದರೆ 2020–21ನೇ ಹಣಕಾಸು ವರ್ಷದಲ್ಲಿ ಶೇ 18ರಷ್ಟು ಇಳಿಕೆ ಆಗಿದೆ. ಕೇಂದ್ರ ಸರ್ಕಾರ ಗುರುವಾರ ಈ ಮಾಹಿತಿ ಬಿಡುಗಡೆ ಮಾಡಿದೆ.

ವ್ಯಾಪಾರ ಕೊರತೆ ಅಂತರವು 2020–21ನೇ ಹಣಕಾಸು ವರ್ಷದಲ್ಲಿ ₹ 7.29 ಲಕ್ಷ ಕೋಟಿಗಳಷ್ಟಾಗಿದೆ. 2019–20ನೇ ಹಣಕಾಸು ವರ್ಷದಲ್ಲಿ ₹ 11.93 ಲಕ್ಷ ಕೋಟಿಗಳಷ್ಟಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.