ಶುಕ್ರವಾರ, ಸೆಪ್ಟೆಂಬರ್ 17, 2021
26 °C

ಜುಲೈನಲ್ಲಿ ರಫ್ತು ಶೇ 47ರಷ್ಟು ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದ ರಫ್ತು ವಹಿವಾಟು ಜುಲೈನಲ್ಲಿ ಶೇಕಡ 47ರಷ್ಟು ಹೆಚ್ಚಾಗಿದ್ದು, ಮೌಲ್ಯದ ಲೆಕ್ಕದಲ್ಲಿ ₹ 2.60 ಲಕ್ಷ ಕೋಟಿಗೆ ಏರಿದೆ.

ಎಂಜಿನಿಯರಿಂಗ್‌, ಪೆಟ್ರೋಲಿಯಂ, ಹರಳು ಮತ್ತು ಚಿನ್ನಾಭರಣ ರಫ್ತು ಉತ್ತಮ ಬೆಳವಣಿಗೆ ಕಂಡಿದ್ದರಿಂದ ಈ ಪ್ರಮಾಣದ ಪ್ರಗತಿ ಸಾಧ್ಯವಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ.

ಆಮದು ವಹಿವಾಟು ಜುಲೈನಲ್ಲಿ ಶೇ 59ರಷ್ಟು ಹೆಚ್ಚಾಗಿದ್ದು ₹ 3.43 ಲಕ್ಷ ಕೋಟಿಗೆ ಏರಿಕೆ ಕಂಡಿದೆ. ವ್ಯಾಪಾರ ಕೊರತೆ ಅಂತರವು ₹ 83,102 ಕೋಟಿಗೆ ತಲುಪಿದೆ.

ಪೆಟ್ರೋಲಿಯಂ ಉತ್ಪನ್ನಗಳ ಆಮದು ಶೇ 97ರಷ್ಟು ಹೆಚ್ಚಾಗಿದೆ. ಚಿನ್ನ ಆಮದು ಶೇ 135ರಷ್ಟು ಏರಿಕೆ ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು