ಎಫ್‌ಡಿಐ ನಿಯಮ ಗಡುವು ವಿಸ್ತರಣೆಗೆ ಅವಕಾಶ ಕೋರಿಕೆ?

7

ಎಫ್‌ಡಿಐ ನಿಯಮ ಗಡುವು ವಿಸ್ತರಣೆಗೆ ಅವಕಾಶ ಕೋರಿಕೆ?

Published:
Updated:
Prajavani

ನವದೆಹಲಿ: ಆನ್‌ಲೈನ್‌ ವಹಿವಾಟಿಗೆ (ಇ–ಕಾಮರ್ಸ್‌) ಸಂಬಂಧಿಸಿದಂತೆ ಸರ್ಕಾರ ಇತ್ತೀಚೆಗೆ ಪ್ರಕಟಿಸಿರುವ ಹೊಸ ನಿಯಮಗಳ ಪಾಲನೆಗೆ ಹೆಚ್ಚುವರಿ ಕಾಲಾವಕಾಶ ನೀಡಬೇಕು ಎಂದು ಪ್ರಮುಖ ಸಂಸ್ಥೆಗಳು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವ ಸಾಧ್ಯತೆ ಇದೆ.

ಗ್ರಾಹಕರಿಗೆ ಬೆಲೆಗಳಲ್ಲಿ ಭಾರಿ ಕಡಿತದ ಕೊಡುಗೆ ನೀಡುವುದನ್ನು ಸರ್ಕಾರ ನಿರ್ಬಂಧಿಸಿದೆ. ಫೆಬ್ರುವರಿ 1ರಿಂದ ಹೊಸ ನಿಯಮ ಜಾರಿಗೆ ತರಲು ಗಡುವು ವಿಧಿಸಿದೆ. ಸದ್ಯಕ್ಕೆ ಜಾರಿಯಲ್ಲಿ ಇರುವ ಪಾಲುದಾರಿಕೆ ಒಪ್ಪಂದ ಮತ್ತು ವಹಿವಾಟಿನ ಸ್ವರೂಪವನ್ನು ಆಮೂಲಾಗ್ರವಾಗಿ ಬದಲಾಯಿಸಬೇಕಾಗಿದೆ. ಈ ಪ್ರಕ್ರಿಯೆ ಪೂರ್ಣಗೊಳಿಸಲು  ನಾಲ್ಕೈದು ತಿಂಗಳು ಹಿಡಿಯಲಿದೆ. ಈ ಕಾರಣಕ್ಕೆ ಸಮಯಾವಕಾಶ ನೀಡಲು ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ನಡೆಸಿದ ಪ್ರಯತ್ನಕ್ಕೆ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಸ್ಪಂದಿಸಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !